HEALTH TIPS

ಮಾನವ ಕೂದಲು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

         ನವದೆಹಲಿ: ಮಾನವ ಕೂದಲಿನ ರಫ್ತಿನ ಮೇಲೆ ಕೇಂದ್ರ ಸರ್ಕಾರ ಮಂಗಳವಾರ ನಿರ್ಬಂಧಗಳನ್ನು ಹೇರಿದ್ದು, ಈ ಕ್ರಮವು ಭಾರತದಿಂದ ಕಳ್ಳಸಾಗಣೆ ಮಾಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕೂದಲು ಉದ್ಯಮ ತಿಳಿಸಿದೆ.

     ಈ ಹಿಂದೆ ಯಾವುದೇ ನಿರ್ಬಂಧವಿಲ್ಲದೆ ಕೂದಲು ರಫ್ತಿಗೆ ಅವಕಾಶ ನೀಡಲಾಗಿತ್ತು. ಆದರೆ ಈಗ ರಫ್ತುದಾರರು ವಾಣಿಜ್ಯ ಸಚಿವಾಲಯದ ಅಡಿಯಲ್ಲಿರುವ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್(ಡಿಜಿಎಫ್‌ಟಿ)ನಿಂದ ಅನುಮತಿ ಅಥವಾ ಪರವಾನಗಿ ಪಡೆಯಬೇಕಾಗುತ್ತದೆ.

        "ಮಾನವ ಕೂದಲಿನ ರಫ್ತು ನೀತಿ, ತೊಳೆದಿರಲಿ ಅಥವಾ ತೊಳೆಯದಿರಲಿ; ಮಾನವ ಕೂದಲಿನ ತ್ಯಾಜ್ಯ ಅಥವಾ ಇತರ ಯಾವುದೇ ರೀತಿಯ ಕಚ್ಚಾ ಮಾನವ ಕೂದಲಿನ ರಫ್ತು ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ನಿರ್ಬಂಧಿತ ವರ್ಗಕ್ಕೆ ಸೇರಿಸಲಾಗಿದೆ" ಎಂದು ವಿದೇಶಿ ವ್ಯಾಪಾರ ಮಹಾನಿರ್ದೇಶಕ(ಡಿಜಿಎಫ್‌ಟಿ) ಸಂತೋಷ್ ಕುಮಾರ್ ಸಾರಂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

          ಇನ್ನೂ ಈ ಕ್ರಮವನ್ನು ಸ್ವಾಗತಿಸಿದ ಮಾನವ ಕೂದಲು ಮತ್ತು ಕೂದಲಿನ ಉತ್ಪನ್ನಗಳ ತಯಾರಕರು ಮತ್ತು ರಫ್ತುದಾರರ ಸಂಘದ ಸದಸ್ಯ ಸುನಿಲ್ ಎಮಾನಿ ಅವರು, ಇದು ನಮ್ಮ ಬಹುಕಾಲದ ಬೇಡಿಕೆಯಾಗಿತ್ತು ಎಂದಿದ್ದಾರೆ.

          ಈ ಉದ್ಯಮವು ಮ್ಯಾನ್ಮಾರ್ ಮತ್ತು ಚೀನಾದಂತಹ ದೇಶಗಳಿಗೆ ಕಚ್ಚಾ ಮಾನವ ಕೂದಲನ್ನು ಕಳ್ಳಸಾಗಣೆ ಮಾಡುವ ವಿಚಿತ್ರ ಸವಾಲನ್ನು ಎದುರಿಸುತ್ತಿದೆ. ಇದರಿಂದ ಸ್ಥಳೀಯ ಕೈಗಾರಿಕೆಗಳು ಮತ್ತು ರಫ್ತುಗಳಿಗೆ ಹಾನಿಯಾಗುತ್ತಿದೆ. "ಈಗ ಈ ನಿರ್ಬಂಧದಿಂದ, ನಿಜವಾದ ರಫ್ತುದಾರರು ಮಾತ್ರ ಉತ್ಪನ್ನವನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ" ಎಂದು ಎಮಾನಿ ಅವರು ಹೇಳಿದ್ದಾರೆ.

       ಭಾರತದಲ್ಲಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಜೊತೆಗೆ ಪಶ್ಚಿಮ ಬಂಗಾಳವು ಮಾನವ ಕೂದಲು ಉದ್ಯಮದ ಪ್ರಮುಖ ಕೇಂದ್ರವಾಗಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries