ಕಾಸರಗೋಡು: ಮಂಗಳೂರು ಸೆಂಕಟ್ರಲ್-ಕಣ್ಣೂರು , ಕಣ್ಣೂರು-ಮಂಗಳೂರು ಸೆಂಟ್ರಲ್ ಅನ್ ರಿಸರ್ವ್‍ಡ್ ಎಕ್ಸ್‍ಪ್ರೆಸ್ ವಿಶೇಷ ಮೆಮು ರೈಲುಗಳು ಬುಧವಾರದಿಂದ ಸಂಚಾರ ಆರಂಭಿಸಿದೆ. ಹಳೇ ಮಂಗಳೂರು ಪ್ಯಾಸೆಂಜರ್ ರೈಲನ್ನು ಬದಲಾಯಿಸಿ ಮೆಮು ರೈಲನ್ನಾಗಿ ಸಂಚಾರ ನಡೆಸಲಾಗುತ್ತಿದೆ. ಮಂಗಳೂರು-ಕಣ್ಣೂರು ಪ್ಯಾಸೆಂಜರ್ ರೈಲು ವೇಳಾಪಟ್ಟಿಯನ್ವಯ ಮೆಮು ರೈಲು ಸಂಚಾರ ನಡೆಸಲಿದೆ.
ಹೊಸದಾಗಿ ಮೆಮು ರೈಲು ಸಂಚಾರ ಆರಂಭಿಸುವಂತೆ ಜಿಲ್ಲೆಯ ಜನತೆ ದೀರ್ಘ ಕಾಲದಿಂದ ಬೇಡಿಕೆಯಿರಿಸಿದ್ದು, ಕೊನೆಗೂ ಪ್ಯಾಸೆಂಜರ್ ರೈಲಿನ ವೇಳಾಪಟ್ಟುಯಲ್ಲೇ ಮೆಮು ರೈಲನ್ನು ಆರಂಭಿಸಲಾಘಿದೆ. ಪ್ಯಾಸೆಂಜರ್ ರೈಲಿನಂತೆ ಅನ್ ರಿಸರ್ವ್‍ಡ್ ಎಕ್ಸ್‍ಪ್ರೆಸ್ ಸ್ಪೆಶ್ಯಲ್ ರೈಲಾಗಿ ಮೆಮು ಸಂಚಾರ ನಡೆಸಲಿದ್ದು, ಎಕ್ಸ್‍ಪ್ರೆಸ್ ದರ ನೀಡಬೇಕಾಘಿದೆ.