ಬದಿಯಡ್ಕ: ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವವು ಶನಿವಾರ ಆರಂಭವಾಗಿದ್ದು, ಜ.30ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವೇದಮೂರ್ತಿ ಗಣೇಶ ತಂತ್ರಿ ದೇಲಂಪಾಡಿ ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಸೋಮವಾರ ಬೆಳಗ್ಗೆ ಗಣಪತಿ ಹೋಮ, ಶಾಂತಿ ಹೋಮ, ಸ್ವಶಾಂತಿ ಹೋಮ, ಅದ್ಭುತ ಶಾಂತಿ ಹೋಮ, ಚೋರಶಾಂತಿ ಹೋಮ, ದಹನ ಪ್ರಾಯಶ್ಚಿತ್ತ, ಅಂಕುರ ಪೂಜೆ, ತ್ರಿಕಾಲ ಪೂಜೆ ನಡೆಯಿತು. ಸಾರಂಗ ಸಂಗೀತ ಶಾಲೆ ಕುಮಾರಮಂಗಲ ಇವರಿಂದ ಸಂಗೀತಾರ್ಚನೆ, ಮಧ್ಯಾಹ್ನ ಮಹಾಪೂಜೆ, ತ್ರಿಕಾಲ ಪೂಜೆ ನಡೆಯಿತು. ಸಂಜೆ ಭಜನೆ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ತ್ರಿಕಾಲಪೂಜೆ, ಅನುಜ್ಞಾ ಕಲಶಪೂಜೆ, ಅವಾಸ ಹೋಮ, ಕಲಶಾವಾಸ ನಡೆಯಿತು.
ಮಂಗಳವಾರ ಬೆಳಗ್ಗೆ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳು, ಭಜನೆ, ಸಂಜೆ ವಿಷ್ಣುಪ್ರಕಾಶ್ ಪೆರ್ವ ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ ನಡೆಯಲಿದೆ. ಪ್ರತೀದಿನ ಋಗ್ವೇದ, ಯಜುರ್ವೇದ ಹಾಗೂ ಸಾಮವೇದಗಳ ಪಾರಾಯಣ ನಡೆಯುತ್ತಿದೆ.