ಕೊಚ್ಚಿ: ಕೊಚ್ಚಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸುವ ಮಕ್ಕಳು ಇನ್ನು ಮುಂದೆ ಆಟವಾಡಿ ಆನಂದಿಸಬಹುದು. ಮೆಟ್ರೋದ ಎಂಜಿ ರಸ್ತೆ ನಿಲ್ದಾಣದಲ್ಲಿ ಮಕ್ಕಳ ಗೇಮಿಂಗ್ ಸ್ಟೇಷನ್ ತೆರೆಯಲಾಗಿದೆ. ಗೇಮಿಂಗ್ ಸ್ಟೇಷನ್ ನ್ನು ಖ್ಯಾತ ಬಾಲನಟ ವೃದ್ಧಿ ವಿಶಾಲ್ ಉದ್ಘಾಟಿಸಿದರು.
ಕೊಚ್ಚಿ ಮೆಟ್ರೋದ ಎಂಜಿ ರಸ್ತೆ ನಿಲ್ದಾಣದಲ್ಲಿ ಮಕ್ಕಳ ಗೇಮಿಂಗ್ ಸ್ಟೇಷನ್ ಆರಂಭಿಸಲಾಗಿದೆ. ಗೇಮಿಂಗ್ ಸ್ಟೇಷನ್ ನಲ್ಲಿ ಕಾರ್ ಆಟಗಳು, ಜೋಕರ್ ಆಟಗಳು ಮತ್ತು ಆಟಿಕೆ ಪಿಕಿಂಗ್ ಆಟಗಳಂತಹ ವಸ್ತುಗಳನ್ನು ಒದಗಿಸುತ್ತದೆ. ನೀವು ನಿಲ್ದಾಣದಲ್ಲಿ ಗೇಮಿಂಗ್ ಗಾಗಿ ಹಣ ಪಾವತಿಸಿ ಆಟಗಳನ್ನು ಆಡಬಹುದು.
ಪುಟಾಣಿಗಳ ಆಟಕ್ಕೆ 50 ರೂಪಾಯಿ ಶುಲ್ಕ ವಿಧಿಸಲಾಗಿದೆ. ಇಷ್ಟಪಡುವ ಆಟಿಕೆಗಳೊಂದಿಗೆ ಆಡಲು ಅವಕಾಶವಿದೆ. ಇತರೆ ಆಟಗಳಿಗೂ ಆಕರ್ಷಕ ಬಹುಮಾನ ನೀಡಲಾಗುವುದು.
ಕೊಚ್ಚಿ ಮೆಟ್ರೊ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕಿ ಸುಮಿ ನಟರಾಜನ್ ಮಾತನಾಡಿ, ಹೆಚ್ಚಿನ ಜನರನ್ನು ಮೆಟ್ರೊ ಕಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಗೇಮಿಂಗ್ ಸ್ಟೇಷನ್ ಆರಂಭಿಸಲಾಗಿದೆ ಎಂದರು.
ಮೆಟ್ಟಿಲು ಹತ್ತುವಾಗ ಸಂಗೀತ ನುಡಿಸುವ ಸಂಗೀತ ಮಳಿಗೆ, ಕಾಲ್ನಡಿಗೆಯಲ್ಲೇ ಆಪರೇಟ್ ಮಾಡಬಹುದಾದ ಮೊಬೈಲ್ ಚಾಜಿರ್ಂಗ್ ಸೌಲಭ್ಯ, ಮಕ್ಕಳಿಗೆ ಮನರಂಜನೆಯೊಂದಿಗೆ ಸೆಲ್ಫಿ ಕಾರ್ನರ್ ಕೂಡ ಇದೆ.