ಕೊಲಂಬೊ: ತನ್ನ ನೆಲದ ಬಂದರು, ಮೂಲಭೂತ ಸೌಕರ್ಯ ನಿರ್ಮಾಣ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ನಡೆಸುವಂತೆ ಭಾರತವನ್ನು ನೆರೆರಾಷ್ಟ್ರ ಶ್ರೀಲಂಕಾ ಆಹ್ವಾನಿಸಿದೆ.
ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಇತ್ತೀಚಿಗಷ್ಟೆ 6,600 ಕೋಟಿ ರೂ. ಸಾಲ ನೆರವು ನೀಡಿತ್ತು.
ಇದೀಗ ಶ್ರೀಲಂಕಾದಲ್ಲಿ ಹೂಡಿಕೆ ನಡೆಸುವಂತೆ ಶ್ರೀಲಂಕಾ ವಿತ್ತ ಸಚಿವ ಬಸಿಲ್ ರಾಜಪಕ್ಸ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಮನವಿ ಮಾಡಿದ್ದಾರೆ.