ಇಡುಕ್ಕಿ: ಪೈನಾವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಎಸ್‍ಎಫ್‍ಐ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ಹತ್ಯೆಯಾದ ಕೆಲವೇ ಕ್ಷಣಗಳಲ್ಲಿ ಸಿಎಂ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಹತ್ಯೆ ಅತ್ಯಂತ ದುಃಖಕರ ಮತ್ತು ಶೋಚನೀಯ ಎಂದು ಮುಖ್ಯಮಂತ್ರಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಯಾವುದೇ ಕಾರಣಕ್ಕೂ ಕಾಲೇಜುಗಳಲ್ಲಿ ಗಲಭೆ ಸೃಷ್ಟಿಸುವ ಯತ್ನಕ್ಕೆ ಅವಕಾಶ ನೀಡುವುದಿಲ್ಲ. ಆದಷ್ಟು ಬೇಗ ಹಂತಕರನ್ನು ಗುರುತಿಸುವಂತೆ ಪೋಲೀಸರಿಗೆ ಸೂಚಿಸಲಾಗಿದೆ. ಧೀರಜ್ ಅವರ ಕುಟುಂಬ ಸದಸ್ಯರು, ಸಹಪಾಠಿಗಳು ಮತ್ತು ಸ್ನೇಹಿತರಿಗೆ ಸಿಎಂ ಸಾಂತ್ವನ ಹೇಳಿದರು.
ನಿನ್ನೆ ಮಧ್ಯಾಹ್ನ ಎಸ್‍ಎಫ್‍ಐ ಕಾರ್ಯಕರ್ತನಿಗೆ ಚೂರಿ ಇರಿಯಲಾಗಿತ್ತು. ದಾಳಿಯ ಹಿಂದೆ ಕೆಎಸ್‍ಯು ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ ಎಂದು ಎಸ್‍ಎಫ್‍ಐ ಆರೋಪಿಸಿದೆ. ಮತ್ತೊಬ್ಬ ವಿದ್ಯಾರ್ಥಿಗೂ ಚಾಕುವಿನಿಂದ ಇರಿಯಲಾಗಿದೆ. ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಮಗದೊಬ್ಬ ವಿದ್ಯಾರ್ಥಿಯ ಭುಜಕ್ಕೂ ಗಂಭೀರ ಗಾಯವಾಗಿದೆ.
ಫೇಸ್‍ಬುಕ್ ಪೋಸ್ಟ್ ನ ಪೂರ್ಣ ಆವೃತ್ತಿ:
ಇಡುಕ್ಕಿ ಪೈನಾವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹಾಗೂ ಎಸ್‍ಎಫ್‍ಐ ಕಾರ್ಯಕರ್ತ ಧೀರಜ್ ರಾಜೇಂದ್ರನ್ ಹತ್ಯೆ ಅತ್ಯಂತ ದುಃಖಕರ ಮತ್ತು ಖಂಡನೀಯ. ಯಾವುದೇ ಕಾರಣಕ್ಕೂ ಕಾಲೇಜುಗಳಲ್ಲಿ ಗಲಭೆ ಸೃಷ್ಟಿಸುವ ಯತ್ನಕ್ಕೆ ಅವಕಾಶ ನೀಡುವುದಿಲ್ಲ. ಧೀರಜ್ ಹಂತಕರನ್ನು ಆದಷ್ಟು ಬೇಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಪೋಲೀಸರಿಗೆ ಸೂಚಿಸಲಾಗಿದೆ. ಕುಟುಂಬ, ಸಹಪಾಠಿಗಳು ಮತ್ತು ಸ್ನೇಹಿತರ ದುಃಖದಲ್ಲಿ ತಾನೂ ಭಾಗಿಯಾಗಿರುವೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.