ಕಾಸರಗೋಡು: ಸ್ವಾಮಿ ವಿವೇಕಾನಂದ ಜಯಂತಿ-ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಯುವ ಮ್ಯಾರಥಾನ್ ಕಾಸರಗೋಡು ಕಡಪ್ಪುರದಲ್ಲಿ ಜರುಗಿತು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ, ಖ್ಯಾತ ಚಲನಚಿತ್ರ ನಟ ಕೃಷ್ಣಕುಮಾರ್ ಮ್ಯಾರಥಾನ್ ಉದ್ಘಾಟಿಸಿದರು. ಯುವಮೋರ್ಚಾ ಜಿಲ್ಲಾಸಮಿತಿ ಅಧ್ಯಕ್ಷ ಧನಂಜಯ ಮಧೂರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಜಿಲ್ಲಾ ಕಾರ್ಯದರ್ಶಿ ಎಂ. ಉಮಾ ಕಡಪ್ಪುರ, ಯುವಮೋರ್ಚಾ ರಾಜ್ಯ ಸಮಿತಿ ಕನ್ವೀನರ್ ಅಂಜು ಜೋಸ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೀರ್ತನ್ ಜೆ.ಕೂಡ್ಲು ಉಪಸ್ಥಿತರಿದ್ದರು. ಕಾಸರಗೋಡು ಕಸಬ ಚೀರುಂಬ ಭಗವತೀ ಕ್ಷೇತ್ರ ವಠಾರದಿಂದ ಆರಂಭಗೊಂಡ ಮ್ಯಾರಥಾನ್‍ನಲ್ಲಿ ಬಿಜೆಪಿ-ಯುವಮೋರ್ಚಾ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.