ಮಧೂರು: ಕೋಟೆಕಣಿಯ ಸಪರಿವಾರ ಶ್ರೀ ಅನ್ನಪೂರ್ಣೇಶ್ವರಿ ಮಹಾಕಾಳಿ ಕ್ಷೇತ್ರ ಸೇವಾ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ವಿಧಿವಶರಾದ ಸೇವಾ ಸಮಿತಿಯ ಅಧ್ಯಕ್ಷರಾಗಿದ್ದ ಗಣಪತಿ ಕೋಟೆಕಣಿ ಅವರ ಸಂಸ್ಮರಣಾ ನುಡಿನಮನ ಕಾರ್ಯಕ್ರಮ ಜರಗಿತು.
ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ಪಾತ್ರಿ ನಾರಾಯಣ, ಡಾ.ವೀಣಾ ಮಂಜುನಾಥ್, ಕೃಷ್ಣ ಪ್ರಸಾದ್, ರಾಜ ವೈದ್ಯರ್, ರಾಧಾ ರವೀಂದ್ರನ್, ಮಾಜಿ ಕೌನ್ಸಿಲರ್‍ಗಳಾದ ಸಂಧ್ಯಾ ಶೆಟ್ಟಿ, ಜಯಶ್ರೀ ದಿವಾಕರ್ ಮೊದಲಾದವರು ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಮುನ್ನ ಗಣಪತಿ ಕೋಟೆಕಣಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ಸೇವಾ ಸಮಿತಿ ಕಾರ್ಯದರ್ಶಿ ರಮೇಶ್ ಕೋಟೆಕಣಿ ಸ್ವಾಗತಿಸಿ, ಲಕ್ಷ್ಮೀನಾರಾಯಣ ವಂದಿಸಿದರು.