ಕೊಚ್ಚಿ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ಪಾವತಿಸಬಾರದು ಎಂಬ ಹೈಕೋರ್ಟ್ ಆದೇಶದ ವಿರುದ್ಧ ಗುರುವಾಯೂರ್ ದೇವಸ್ವಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಪ್ರವಾಹ ಮತ್ತು ಕೊರೋನಾ ಸಂದರ್ಭದಲ್ಲಿ ಗುರುವಾಯೂರು ದೇವಸ್ವಂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 10 ಕೋಟಿ ರೂ.ನೀಡಿತ್ತು. ಆದರೆ, ಪರಿಹಾರ ನಿಧಿಗೆ ನೀಡುವ ಕೊಡುಗೆ ದೇವಸ್ವಂ ಮಂಡಳಿಯ ವ್ಯಾಪ್ತಿಯಲ್ಲಿಲ್ಲ ಎಂದು ಹೈಕೋರ್ಟ್‍ನ ಪೂರ್ಣ ಪೀಠ ತೀರ್ಪು ನೀಡಿತ್ತು. ಗುರುವಾಯೂರ್ ದೇವಸ್ವಂ ಕಾಯ್ದೆಯ ಸೆಕ್ಷನ್ 27ರ ಅಡಿಯಲ್ಲಿ ಪರಿಹಾರ ನಿಧಿಗೆ ಯಾವುದೇ ಹಣವನ್ನು ಮೀಸಲಿಡುವಂತಿಲ್ಲ ಎಂದು ಪೂರ್ಣ ಪೀಠ ಹೇಳಿತ್ತು.
ಡಿಸೆಂಬರ್ 2020 ರ ಹೈಕೋರ್ಟ್ ಪೂರ್ಣ ಪೀಠದ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಇನ್ನೂ ಮೇಲ್ಮನವಿ ಸಲ್ಲಿಸಿಲ್ಲ. ಆದರೆ, ದೇವಸ್ವಂ ಕಾಯ್ದೆಯಡಿ ದೇಣಿಗೆಯನ್ನು ವರ್ಗಾಯಿಸುವ ಹಕ್ಕು ತನಗಿದೆ ಎಂದು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದೆ.
ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡುವುದು ಕಾನೂನುಬದ್ಧವಾಗಿದೆ ಎಂದು ದೇವಸ್ವಂ ಮಂಡಳಿ ಅಭಿಪ್ರಾಯಪಟ್ಟಿದೆ. ಭಕ್ತರ ಹಿತದೃಷ್ಟಿಯಿಂದ ಪರಿಹಾರ ನಿಧಿಗೆ ಹಣ ನೀಡಲಾಗಿದೆ ಎಂದು ದೇವಸ್ವಂ ಮಂಡಳಿ ಹೇಳಿಕೊಂಡಿದೆ.
ದೇವಸ್ಥಾನದ ಉದ್ದೇಶಕ್ಕೆ ಹೊರತುಪಡಿಸಿ ಬೇರೆಡೆಗೆÉ ಹಣವನ್ನು ನೀಡುವುದರಲ್ಲಿ ತಪ್ಪೇನಿಲ್ಲ ಎಂದು ಮಂಡಳಿ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಿದೆ. ಗುರುವಾಯೂರು ದೇವಸ್ಥಾನದ ಆಸ್ತಿಗೆ ಗುರುವಾಯೂರಪ್ಪನ್ ವಾರಸುದಾರರು. ಟ್ರಸ್ಟಿಯಾಗಿ, ಆಸ್ತಿ ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ದೇವಸ್ವಂ ಮಂಡಳಿ ಹೊಂದಿದೆ ಎಂದು ಪೀಠ ಹೇಳಿದೆ.