ಉಪ್ಪಳ: ಸೇವಾಭಾರತಿ ಜೋಡುಕಲ್ಲು ಇದರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಕೇಶವ ಶಿಶುಮಂದಿರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಸೇವಾಭಾರತಿಯ ಅಧ್ಯಕ್ಷ ದಾಮೋದರ ಉಬರಳೆ ದೀಪ ಬೆಳಗಿಸಿ ಉದ್ಘಾಟಿಸಿದರು. ಸೇವಾಭಾರತಿ ಸಂಚಾಲಕ ಸದಾನಂದ ಕೊಮ್ಮಂಡ ರವರು ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ಬಗ್ಗೆ ಮಾಹಿತಿ ನೀಡಿದರು. ಹಿರಿಯರಾದ ಕುಂಞಣ್ಣ ರೈ , ನಾರಾಯಣ ಕೆ ಪಿ, ಲೋಕೇಶ್ ನೊಂಡ, ದೀಪಕ್ , ಶೋಭಾ ಜೋಡುಕಲ್ಲು, ಶ್ರೇಯ , ತೇಜಾಕ್ಷಿ , ರಾಧಾಕೃಷ್ಣ , ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.