ಮಂಜೇಶ್ವರ: ನಾಳ ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಇಂದು ಸಂಜೆ 6 ರಿಂದ ವರ್ಕಾಡಿ ಸುಂಕದಕಟ್ಟೆಯ |ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದ ಪರಿಸರದಲ್ಲಿ ದೈವ ಸ|ಂಕಲ್ಪ ಯಕ್ಷಗಾನ ಬಯಲಾಟ ನಡೆಯಲಿದೆ. ಅಮೃತ ಅಡಿಗ, ಮೋಹನ ಕಲಂಬಾಡಿ, ನಿರಂಜನ ಬೆಳ್ಳೂರು ಹಿಮ್ಮೇಳದಲ್ಲಿ ಹಾಗೂ ರಘುನಾಥ ರೈ ಅಂಕತ್ತಡ್ಕ, ಸೀತಾರಾಮ ಕಶೆಕೋಡಿ, ಪುಷ್ಪರಾಜ ಜೋಗಿ, ರಾಘವೇಂದ್ರ ಆಸ್ರಣ್ಣ, ರಾಘವ ಎಚ್. ಗೇರುಕಟ್ಟೆ ಮೊದಲಾದವರು ಮುಮ್ಮೇಳದಲ್ಲಿ ಕಲಾವಿದರಾಗಿ ಭಾಗವಹಿಸುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.