ತಿರುವನಂತಪುರ: ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರಪತಿಗಳ ಪೋಲೀಸ್ ಪದಕಗಳನ್ನು ನಿನ್ನೆ ಪ್ರಕಟಿಸಲಾಗಿದೆ. ಐಜಿ ಸಿ. ನಾಗರಾಜು ಸೇರಿದಂತೆ ಕೇರಳದ 10 ಮಂದಿಗೆ ವಿಶಿಷ್ಟ ಸೇವೆಗಾಗಿ ಪದಕ ನೀಡಲಾಗುವುದು.
ಡಿವೈಎಸ್ಪಿಗಳಾದ ಮೊಹಮ್ಮದ್ ಕಬೀರ್ ರಾವುತರ್, ವೇಣುಗೋಪಾಲ್ ಆರ್.ಕೆ, ಶ್ಯಾಮ್ ಸುಂದರ್ ಟಿ.ಪಿ, ಬಿ. ಕೃಷ್ಣಕುಮಾರ್, ಎಸ್ಪಿ ಜಯಶಂಕರ್ ರಮೇಶ್ ಚಂದ್ರನ್, ಹಿರಿಯ ಸಿಪಿಒ ಶೀಬಾ ಕೃಷ್ಣನ್‍ಕುಟ್ಟಿ, ಸಹಾಯಕ ಕಮಿಷನರ್ ಎಂ.ಕೆ.ಗೋಪಾಲಕೃಷ್ಣನ್, ಎಸ್‍ಐ ಸಜನ್ ಕೆ ಜಾರ್ಜ್ ಮತ್ತು ಎಸ್‍ಐ ಶಶಿಕುಮಾರ್ ಲಕ್ಷ್ಮಣ್ ಅವರಿಗೆ ಪೊಲೀಸ್ ಪದಕ ಘೋಷಿಸಲಾಗಿದೆ.
ಸಿಬಿಐ ತಿರುವನಂತಪುರ ಘಟಕದ ಡಿವೈಎಸ್ಪಿ ಟಿ.ಪಿ.ಅನಂತಕೃಷ್ಣನ್, ಅಸ್ಸಾಂ ರೈಫಲ್ಸ್‍ನ ಚಾಕೊ ಪಿ ಜಾರ್ಜ್, ಸುರೇಶ್ ಪ್ರಸಾದ್ ಮತ್ತು ಬಿಎಸ್‍ಎಫ್‍ನ ಮರ್ಸಿ ಥಾಮಸ್ ಕೂಡ ಪದಕ ಪಡೆದಿರುವರು. ಭಾರತದ ಪ್ರತಿ ರಾಜ್ಯಕ್ಕೆ ಒಟ್ಟು 662 ಪೊಲೀಸ್ ಪದಕಗಳನ್ನು ಘೋಷಿಸಲಾಗಿದೆ.