HEALTH TIPS

ನ್ಯಾಯಾಧೀಶರ ಬಗ್ಗೆ ನಿರ್ಧರಿಸಲು ಪಾರದರ್ಶಕ ನ್ಯಾಯಾಲಯವೊಂದೇ ದಾರಿ ಎಂದು ನ್ಯಾ. ಚಂದ್ರಚೂಡ್ ಹೇಳಿದ್ದೇಕೆ?

           ನ್ಯಾಯಾಲಯ ಕಲಾಪಗಳನ್ನು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿಸುವ ಅಗತ್ಯಕ್ಕೆ ರವಿವಾರ ಮತ್ತೆ ಒತ್ತು ನೀಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರು,ನ್ಯಾಯಾಧೀಶರನ್ನು ಅವರು ನೀಡಿದ ತೀರ್ಪುಗಳ ಸಂಖ್ಯೆ ಮತ್ತು ಪ್ರಕರಣ ವಿಲೇವಾರಿ ದರದಿಂದ ಮಾತ್ರ ನಿರ್ಧರಿಸುವುದಲ್ಲ, ನ್ಯಾಯಾಲಯದ ನಾಲ್ಕು ಗೋಡೆಗಳ ನಡುವಿನ ಅವರ ನಡವಳಿಕೆಯನ್ನೂ ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.

          ಲೇಖಕ ಬಲರಾಮ ಕೆ.ಗುಪ್ತಾ ಅವರ ಕೃತಿಯ ವರ್ಚುವಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾ.ಚಂದ್ರಚೂಡ,ನ್ಯಾಯಾಂಗ ಕಲಾಪಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗದಿದ್ದರೆ ನ್ಯಾಯಾಲಯಗಳು ಮಾಡುತ್ತಿರುವ ಕೆಲಸದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ಸಾರ್ವಜನಿಕರಿಗೆ ಸಾಧ್ಯವಾಗುವುದಿಲ್ಲ. ನ್ಯಾಯಾಂಗ ಕಲಾಪಗಳು ಸಾರ್ವಜನಿಕರಿಗೆ ಮುಕ್ತವಾದರೆ ಅದು ನ್ಯಾಯಾಂಗ ಸಂಸ್ಥೆಗೆ ನ್ಯಾಯಸಮ್ಮತತೆಯನ್ನು ನೀಡುವುದು ಮಾತ್ರವಲ್ಲ,ಹೊಣೆಗಾರಿಕೆಯ ಪ್ರಜಾಸತ್ತಾತ್ಮಕ ತತ್ತ್ವಕ್ಕೆ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ ಎಂದರು.

          ವಿಲೇವಾರಿ ದರ ಮತ್ತು ತೀರ್ಪುಗಳ ಮಾಹಿತಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಸುಲಭವಾಗಿ ಲಭ್ಯವಿರುತ್ತವೆ,ಆದರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರ ನಡವಳಿಕೆಯನ್ನು ಸುಲಭವಾಗಿ ಕಂಡುಕೊಳ್ಳಲು ಸಾಧ್ಯವಿಲ್ಲ. ಕಾರ್ಯಕ್ಷಮತೆ ವೌಲ್ಯಮಾಪನದ ಈ ಪ್ರಮುಖ ಮಾನದಂಡ ಸಾರ್ವಜನಿಕವಾಗಿ ಲಭ್ಯವಿಲ್ಲದಿದ್ದರೆ ನ್ಯಾಯಾಧೀಶರ ಕಾರ್ಯಕ್ಷಮತೆಯ ಮೌಲ್ಯಮಾಪನ ಕಠಿಣವಾಗುತ್ತದೆ ಮತ್ತು ನ್ಯಾಯಾಂಗ ಉತ್ತರದಾಯಿತ್ವಕ್ಕೆ ಸವಾಲುಗಳನ್ನು ಒಡ್ಡುತ್ತದೆ ಎಂದು ಅವರು ತಿಳಿಸಿದರು.

            ಪಾರದರ್ಶಕತೆಯ ಕೊರತೆಯು ಅಪನಂಬಿಕೆ ಮತ್ತು ಅಭದ್ರತೆಯ ಭಾವನೆಯನ್ನು ಹುಟ್ಟುಹಾಕುತ್ತದೆ ಎಂದು ಹೇಳಿದ್ದ ದಲಾಯಿ ಲಾಮಾರ ನಿದರ್ಶನವನ್ನು ನೀಡಿದ ನ್ಯಾ.ಚಂದ್ರಚೂಡ ಅವರು,ಕಾನೂನು ಪತ್ರಿಕೋದ್ಯಮ ಮತ್ತು ನ್ಯಾಯಾಂಗ ಕಲಾಪಗಳ ವರದಿಗಾರಿಕೆಯು ಹೆಚ್ಚುತ್ತಿದೆಯಾದರೂ ಅದು ತನ್ನದೇ ಆದ ಮಿತಿಗಳನ್ನು ಹೊಂದಿದೆ ಎಂದರು.

           ನ್ಯಾಯಾಲಯಗಳ ಕಲಾಪಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸುವುದನ್ನು ನ್ಯಾ.ಚಂದ್ರಚೂಡ ಬೆಂಬಲಿಸಿರುವುದು ಇದೇ ಮೊದಲೇನಲ್ಲ. ನ್ಯಾಯಾಲಯಗಳು ತಮ್ಮ ಕಲಾಪಗಳನ್ನು ನೇರಪ್ರಸಾರ ಮಾಡುವಂತಾಗಲು ಲೈವ್ ಸ್ಟ್ರೀಮಿಂಗ್ ನಿಯಮಗಳನ್ನು ರೂಪಿಸಲಾಗಿದೆ ಎಂದು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅವರು ತಿಳಿಸಿದ್ದರು. ಜಿಲ್ಲಾ ಮತ್ತು ಉಚ್ಚ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇ-ಫೈಲಿಂಗ್ ಕೋರಿ ಅವರು ಇತ್ತೀಚಿಗೆ ಹೈಕೋರ್ಟ್‌ಗಳ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನೂ ಬರೆದಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries