ಬಿಹಾರ: ಸೇನಾ ವಿಮಾನವೊಂದು ತಾಂತ್ರಿಕ ದೋಷದಿಂದಾಗಿ ಪತನಗೊಂಡಿದ್ದು ಅದೃಷ್ಟವಶಾತ್ ಇಬ್ಬರು ತರಬೇತು ಪೈಲಟ್ ಗಳು ಬಚಾವ್ ಆಗಿದ್ದಾರೆ.
ಗಯಾದಲ್ಲಿರುವ ಇಂಡಿಯನ್ ಆರ್ಮಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ಇಬ್ಬರು ಟ್ರೈನಿ ಪೈಲಟ್‌ಗಳನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ. ಆದರೂ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಗಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಬಂಗಜಿತ್ ತಿಳಿಸಿದ್ದಾರೆ.
ಪೈಲಟ್‌ಗಳು ತುರ್ತು ಭೂಸ್ಪರ್ಶ ಮಾಡಲು ಯತ್ನಿಸಿದಾಗ ಬೋಧಗಯಾ ಬ್ಲಾಕ್‌ನ ಹಳ್ಳಿಯೊಂದಕ್ಕೆ ಹೊಂದಿಕೊಂಡಿರುವ ಹೊಲಗಳಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದರು. ತರಬೇತುದಾರ ವಿಮಾನ ಪತನವಾಗುತ್ತಿರುವುದನ್ನು ಕಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಕೆಡೆಟ್‌ಗಳನ್ನು ಹೊರತೆಗೆದಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಸೇನಾ ಸಿಬ್ಬಂದಿ ಅವರನ್ನು ಕರೆದೊಯ್ದರು.
ಅಪಘಾತಕ್ಕೀಡಾದ ವಿಮಾನದ ಅವಶೇಷಗಳನ್ನೂ ಅವರು ಸಂಗ್ರಹಿಸಿದ್ದಾರೆ. 'ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದ್ದು, ತಜ್ಞರ ಪರೀಕ್ಷೆಯ ನಂತರ ವಿವರ ತಿಳಿಯಲಿದೆ' ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.