ತಿರುವನಂತಪುರ: ಉನ್ನತ ಚಿಕಿತ್ಸೆಗಾಗಿ ಅಮೆರಿಕಾ ತೆರಳಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಿಕಿತ್ಸೆ ಕಳೆದು ಶನಿವಾರ ದುಬೈ ತಲುಪಿದ್ದಾರೆ. ಈ ಹಿಂದೆ ಚಿಕಿತ್ಸೆ ಕಳೆದು ಜ. 29ಕ್ಕೆ ಕೇರಳ ತಲುಪುವುದಾಗಿ ನಿಗದಿಯಾಗಿದ್ದರೂ, ಒಂದು ವಾರ ಕಾಲ ಯುಎಇಯಲ್ಲಿ ತಂಗುವ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ದುಬೈಯಲ್ಲಿ ಎರಡು ದಿವಸಗಳ ವಿಶ್ರಾಂತಿ ನಂತರ ಅಬುದಾಬಿ, ಶಾರ್ಜಾದ ಅಧಿಕಾರಿಗಳ ಜತೆ ಸಮಾಲೋಚನೆಯನ್ನೂ ನಡೆಸಲಿದ್ದಾರೆ. ಫೆಬ್ರವರಿ 4ರಂದು ನಡೆಯುವ ದುಬೈ ಎಕ್ಸ್‍ಪೋದ ಕೇರಳ ಪೆವಿಲಿಯನ್ ಉದ್ಘಾಟಿಸಲಿದ್ದಾರೆ. 5ರಂದು ಬೆಳಗ್ಗೆ ಯುಎಇಯ ಪ್ರಮುಖ ಉದ್ದಿಮೆದಾರರು ಭಾಗವಹಿಸುವ ಕಾರ್ಯಕ್ರಮ ಹಾಗೂ ನೋರ್ಕಾದ ಉದ್ಘಾಟನೆಯನ್ನೂ ನಿರ್ವಹಿಸುವರು. ಫೆ. 7ಕ್ಕೆ ಕೇರಳಕ್ಕೆ ವಾಪಸಾಗಲಿದ್ದಾರೆ.