HEALTH TIPS

ಪಂಜಾಬ್ ನ ರಕ್ಷಣೆಗಾಗಿ ಚುನಾವಣಾ ಕಣಕ್ಕೆ ಇಳಿಯುತ್ತಿದ್ದೇವೆ: ರೈತ ಸಂಘಟನೆ ಎಸ್‌ಎಸ್‌ಎಂ ಘೋಷಣೆ

                 ಚಂಡೀಗಢ: ರಾಜಕೀಯ ಪಕ್ಷಗಳು ಸೃಷ್ಟಿಸಿರುವ ''ಕೊಳಕನ್ನು'' ತೆಗೆದುಹಾಕುವ ಉದ್ದೇಶದಿಂದ ಪಂಜಾಬ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ತಾನು ಕೈಗೊಂಡಿರುವುದಾಗಿ ದೇಶದ ಪ್ರಮುಖ ರೈತ ಸಂಘಟನೆಗಳಲ್ಲೊಂದಾದ ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ)ದ ಅಧ್ಯಕ್ಷ ಬಲಬೀರ್ ಸಿಂಗ್ರಾಜೇವಾಲ್ ತಿಳಿಸಿದ್ದಾರೆ.

            ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಮ್ ಆದ್ಮಿ ಪಕ್ಷವು ಭಗವಂತ್ ಸಿಂಗ್ ಮಾನ್ ಅವರನ್ನು ಘೋಷಿಸಿರುವುದನ್ನು ಅವರು ವಿರೋಧಿಸಿದ್ದಾರೆ ಹಾಗೂ ಆಪ್ ಪಕ್ಷದ ಜೊತೆಗೆ ಚುನಾವಣಾ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

               ''ಪಂಜಾಬ್ ಅನ್ನು ರಕ್ಷಿಸುವುದಕ್ಕಾಗಿ , ವ್ಯವಸ್ಥೆಯ ಸುಧಾರಣೆಗಾಗಿ ನಾವು ಚುನಾವಣಾ ಕಣದಲ್ಲಿದ್ದೇವೆ. ಪಂಜಾಬ್ನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಮಕ್ಕಳು ಭರವಸೆಯನ್ನೇ ಕಳೆದುಕೊಂಡಿದ್ದಾರೆ. ನಿರುದ್ಯೋಗದ ಕಾರಣದಿಂದಾಗಿ ಅವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಇದರಿಂದಾಗಿ ಅಪರಾಧ ಪ್ರಮಾಣದಲ್ಲಿ ಹೆಚ್ಚಳವಾಗಿದೆ'' ಎಂದು ರಾಜೇವಾಲ್ ತಿಳಿಸಿದ್ದಾರೆ.
             ಮಾಮೂಲಿ ರಾಜಕೀಯ ಪಕ್ಷಗಳ ಬಗ್ಗೆ ಜನರು ಭರವಸೆ ಕಳೆದುಕೊಂಡಿದ್ದು, ಅವರ ಒತ್ತಡದಿಂದಲೇ ತಾನು ಚುನಾವಣಾ ಕಣಕ್ಕೆ ಇಳಿದಿರುವುದಾಗಿ 80 ವರ್ಷದ ಈ ರೈತ ನಾಯಕ ತಿಳಿಸಿದ್ದಾರೆ.'' ರಾಜ್ಯದ ರಾಜಕಾರಣಿಗಳು ಏನನ್ನೂ ಮಾಡುತ್ತಿಲ್ಲ. ಅಲ್ಲಿ ಆಡಳಿತಾತ್ಮಕ ಭ್ರಷ್ಟಾಚಾರವಿದೆ. ಜನರಿಗೆ ಸೇವೆ ಸಲ್ಲಿಸುವ ಸಾಂಪ್ರದಾಯಿಕ ಧ್ಯೇಯದಿಂದ ರಾಜಕಾರಣಿಗಳು ದೂರ ಸರಿದಿದ್ದಾರೆ. ಜನಸಾಮಾನ್ಯರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಕೇಂದ್ರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತು ನಡೆಸಿದ್ದ ಚಳವಳಿಯ ಸ್ಥಾಪಕರಲ್ಲೊಬ್ಬರಾದ ರಾಜೆವಾಲ್ ಹೇಳಿದ್ದಾರೆ.ಸಂಯುಕ್ತ ಸಮಾಜ ಮೋರ್ಚಾವು ರಾಜ್ಯದ ಎಲ್ಲಾ 117 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದವರು ಹೇಳಿದರು.
             ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದಕ್ಕಾಗಿ ಆಪ್ ಪಕ್ಷದ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದರು. ''ಆಪ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಮದ್ಯವಿಲ್ಲದೆ ಆತ ಬದುಕಲಾರ ಎಂಬುದು ಯಾರಿಗೆ ತಾನೇ ತಿಳಿದಿಲ್ಲ'' ಎಂದವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries