ಉಪ್ಪಳ: ವಿವಾಹ ಸಮಾರಂಭದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷತೊಟ್ಟು ಅಪಮಾನಗೈದ ಆರೋಪ ಎದುರಿಸುತ್ತಿರುವ ಉಪ್ಪಳದ ವರ ಉಮರುಲ್ ಬಾಷಿತ್‍ನ ಮನೆಯ ಕಿಟಿಕಿ ಗಾಜಿಗೆ ಹಾನಿಯೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಆಗಮಿಸಿದ ಮೂರು ಮಂದಿಯ ತಂಡ ಮನೆಗೆ ಹಾನಿಯೆಸಗಿ, ಗೋಡೆಗೆ ಬಣ್ಣ ಬಳಿದು ವಿಕೃತಿಗೊಳಿಸಲಾಗಿತ್ತು.
ವಿಟ್ಲ ಪೊಲೀಸ್ ಠಾಣೆ ವಯಾಪ್ತಿಯ ಕೊಳ್ನಾಡು ಎಂಬಲ್ಲಿನ ಯುವತಿ ಜತೆ ಉಮರುಲ್ ಬಾಷಿತ್‍ನ ವಿವಾಹ ಜ. 6ರಂದು ನಡೆದಿದ್ದು, ವಧುಮನೆಗೆ ತೆರಳಿದ್ದ ಸಂದರ್ಭ ವರ ಕೊರಗಜ್ಜನ ವೇಷಧರಿಸಿ ಕುಣಿದಾಡಿದ ಫೋಟೋ ವೈರಲ್ ಆಗಿತ್ತು.