ಪಾಟ್ನಾ: ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿರುವ ಜುರಬ್ ಗಂಜ್ ಎನ್ನುವ ಗ್ರಾಮ ಕೇವಲ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಅಪರಾಧ ಎಸಗಿರುವ ಕುಖ್ಯಾತಿಗೆ ಪಾತ್ರವಾಗಿದೆ.
ಈ ಗ್ರಾಮದ ಅಪರಾಧಿಗಳ ಜಾಲ ಜಾರ್ಖಂಡ್, ಮಹಾರಾಷ್ಟ್ರ, ಉತ್ತರಪ್ರಏಶ, ಪಶ್ಚಿಮ ಬಂಗಾಳ ರಾಜ್ಯಗಳಿಗೂ ಹರಡಿದೆ. ಹೀಗಾಗಿ ಅಲ್ಲಿನ ಪೊಲೀಸರು ಜುರಬ್ ಗಂಜ್ ನಿವಾಸಿ ಅಪರಾಧಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ ಈ ಜುರಬ್ ಗಂಜ್ ಗ್ರಾಮದಲ್ಲಿ ದೊಡ್ಡವರು ಮಾತ್ರವೇ ಅಪರಾಧ ಕೃತ್ಯ ಎಸಗುತ್ತಿಲ್ಲ. ಮಕ್ಕಳು ಕೂಡಾ ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆ. ದೊಡ್ಡ ದೊಡ್ಡ ಕ್ರಿಮಿನಲ್ ಅಪರಾಧಿಗಳು ಮಕ್ಕಳಿಗೆ ತರಬೇತಿಯನ್ನು ನೀಡುತ್ತಾರೆ.
ಅಪರಾಧ ಎಸಗುವುದು, ಪೊಲೀಸರಿಂದ ಬಚಾವಾಗುವುದು ಮತ್ತು ಪೊಲೀಸರು ನೀಡುವ ಚಿತ್ರಹಿಂಸೆಯನ್ನು ತಡೆದುಕೊಳ್ಳುವು ಹೀಗೆ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ದೇಶಾದ್ಯಂತ 150 ಪ್ರಕರಣಗಳು ಜುರಬ್ ಗಂಜ್ ನಿವಾಸಿಗಳ ಮೇಲೆ ದಾಖಲಾಗಿವೆ. ಅದರಲ್ಲೂ ಕೋಢಾ ಗ್ಯಾಂಗ್ ಎನ್ನುವ ತಂಡ ಸಕ್ರಿಯವಾಗಿ ಅಪರಾಧಾಳಲ್ಲಿ ಎಗ್ಗಿಲ್ಲದೆ ತೊಡಗಿಕೊಂಡಿದೆ.