ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಬೆಡಿ ಉತ್ಸವ ಇಂದು ನಡೆಯಲಿದೆ.
ಭಾನುವಾರ ಬೆಳಿಗ್ಗೆ 6.30 ರಿಂದ ಉತ್ಸವ, ಶ್ರೀಭೂತಬಲಿ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 6.30 ಕ್ಕೆ ದೀಪಾರಾಧನೆ, ವಿಶ್ವರೂಪ ದರ್ಶನ, ರಾತ್ರಿ 7 ರಿಂದ ನಡುದೀಪೋತ್ಸವ, ದರ್ಶನ ಬಲಿ, ಪೂಜೆ ನಡೆಯಿತು.
ಇಂದು ಬೆಳಿಗ್ಗೆ 6.30 ಕ್ಕೆ ಉತ್ಸವ, ಶ್ರೀಭುತಬಲಿ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನದಾನ ನಡೆಯಲಿದೆ. ರಾತ್ರಿ 7 ರಿಂದ ಉತ್ಸವ, ಕುಂಬಳೆ ಶಾಲಾ ಮೈದಾನ ಸಮೀಪ ಬೆಡಿ ಸೇವೆ ನಡೆಯಲಿದೆ. ಬಳಿಕ ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.
ನಾಳೆ(ಜ.18) ಬೆಳಿಗ್ಗೆ 6.30 ರಿಂದ ಕವಾಟೋದ್ಘಾಟನೆ, 10.30 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಅನ್ನದಾನ, ಅಪರಾಹ್ನ 3.30 ರಿಂದ ಅವಭೃತೋತ್ಸವ, ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಧ್ವಜಾವರೋಹಣದಿಂದ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.