ಉಪ್ಪಳ: ಬಿಜೆಪಿ ಪೈವಳಿಕೆ ಸಮಿತಿ ವತಿಯಿಂದ ಬುಧವಾರ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾಯರ್ ಕಟ್ಟೆ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿಎಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸ್ವಾಮಿ ವಿವೇಕಾನಂದರು ವಿಶ್ವವೇ ಒಪ್ಪಿಕೊಂಡ ಸನ್ಯಾಸಿಯಾಗಿ ಭಾರತೀಯತೆಯನ್ನು ಜಗದಗಲ ಪ್ರಚುರಪಡಿಸಿದವರು. ವಿದೇಶ ಗಳಲ್ಲಿ ಭಾರತೀಯ ಸಂಸ್ಕøತಿಗಿದ್ದ ಅಡೆತಡೆಗಳನ್ನು ನಿವಾರಿಸಿದವರು ಸ್ವಾಮಿ ವಿವೇಕಾನಂದರು. ಅವರ ಜೀವನ ಎಲ್ಲರಿಗೂ ಮಾದರಿ ಎಂದು ಹೇಳಿದರು.
ಲೋಕೇಶ್ ನೋಂಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಅನಂತರಾಮ ಪ್ರಸಾದ್ ರೈ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ನಟರಾಜ ಮಾಸ್ತರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.