ಕಾಸರಗೋಡು: ಎಡನೀರು ಶ್ರೀ ವನಶಾಸ್ತಾರ ದೇವಸ್ಥಾನದಲ್ಲಿ ಮಕರಸಂಕ್ರಮಣ ಉತ್ಸವ ಜ.14ರಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಬೆಳಗ್ಗೆ ಗಣಪತಿ ಹೋಮ, ಏಕಾದಶರುದ್ರ, ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯುವುದು.
ಸಂಜೆ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಶಾಸಕ ಸಿ.ಎಚ್ ಕುಞಂಬು ದೇವಾಲಯದ ನೂತನ ಆವರಣಗೋಡೆಯನ್ನು ಉದ್ಘಾಟಿಸುವರು. ಅನಂತರ ಸಾಮೂಹಿಕ ಸುತ್ತು ಬೆಳಕಿನ ಸೇವೆ ನಡೆಯುವುದು.