ಕಾಸರಗೋಡು: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಸಿಪಿಎಂ ನಿರಂತರ ಬೆದರಿಕೆಯಾಗುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ತಿಳಿಸಿದ್ದಾರೆ. ಅವರು ಬಿಜೆಪಿ ಜಿಲ್ಲಾಸಮಿತಿ ಕಚೇರಿಯಲ್ಲಿ ನಡೆದ ಮಹಿಳಾಮೋರ್ಚಾ ಜಿಲ್ಲಾ ನಾಯಕತ್ವ ಸಭೆ ಉದ್ಘಾಟಿಸಿ ಮಾತನಡಿದರು.
ಕೋವಿಡ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಹೇರಿದ್ದ ನಿಯಂತ್ರಣವನ್ನು, ಸಿಪಿಎಂ ಸಮ್ಮೇಳನ ಸುಸೂತ್ರವಾಗಿ ನಡೆಸುವ ಏಕ ಉದ್ದೇಶದಿಂದ ಸರ್ಕಾರದ ಮೂಲಕ ಪ್ರತ್ಯೇಕ ಆದೇಶ ಹೊರಡಿಸಿ ಹಿಂಪಡೆಯುವಂತೆ ಮಾಡಿರುವುದು ಖಂಡನೀಯ. ಸಿಪಿಎಂ ಸಾಮಾಜಿಕ ಬದ್ಧತೆಯನ್ನು ಕೈಬಿಟ್ಟಿದೆ. ಸರ್ಕಾರಿ ಉದ್ಯೋಗಿಗಳಿಗೆ ಕರೊನಾಕ್ಕಿಂತ ಸಿಪಿಎಂ ಮಾರಕವಾಗಿ ಪರಿಣಮಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯ ಮೈಕ್ರೋ ಡೊನೇಶನ್ ಕ್ಯಾಂಪನ್ನು ರವೀಶ ತಂತ್ರಿ ಉದ್ಘಾಟಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಭವ್ಯಾಹರಿದಾಸ್, ಉಪಾಧ್ಯಕ್ಷೆ ರತಿ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್, ಜಿಲ್ಲಾ ಪ್ರಧಾನಕಾರ್ಯದರ್ಶಿ ಲಲಿತಾಕೇಶವ್, ಗೀತಾ ಉಪಸ್ಥಿತರಿದ್ದರು.