ನವದೆಹಲಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕೆಲ ಇತರ ಹಿರಿಯ ಮುಖಂಡರು ಹಾಗೂ ಅತೃಪ್ತರು ಪಕ್ಷ ತೊರೆಯುವ ಸಾಧ್ಯತೆಯಿದ್ದು, ಪಂಚ ರಾಜ್ಯಗಳ ಚುನಾವಣೆ ಮೇಲೆ ನಿರ್ಣಾಯಕವಾಗಬಹುದು ಎಂದು ಮೂಲಗಳು ತಿಳಿಸಿವೆ.
ಮಾಜಿ ಕೇಂದ್ರ ಸಚಿವ ಮತ್ತು ಪ್ರಧಾನ ಕಾರ್ಯದರ್ಶಿ ಆರ್‌ಪಿಎನ್ ಸಿಂಗ್ ಪಕ್ಷ ತೊರೆಯುತ್ತಿದ್ದಂತೆ ಪಕ್ಷದಲ್ಲಿ ಸೈಡ್ ಲೈನ್ ಆಗಿರುವ ಮತ್ತು ಉತ್ತಮ ಭವಿಷ್ಯಕ್ಕಾಗಿ ನೋಡುತ್ತಿರುವ ಅತೃಪ್ತ ನಾಯಕರ ಪಟ್ಟಿಯತ್ತ ಗಮನ ಹರಿಸಲಾಗಿದೆ. ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಫಲಿತಾಂಶಗಳು ಪ್ರಮುಖವಾಗಿವೆ ಎಂದು ಮೂಲಗಳು ತಿಳಿಸಿದ್ದು, ಪಕ್ಷದ ಅನೇಕ ನಾಯಕರು ಪಕ್ಷದ ಕಾರ್ಯಕ್ಷಮತೆಯನ್ನು ನೋಡಲು ಕಾಯುತ್ತಿದ್ದಾರೆ.
“ಹಲವು ಕಾಂಗ್ರೆಸ್ ನಾಯಕರು ಇತರ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಮುಂದಿನ ದಿನಗಳಲ್ಲಿ ನಾವು ವಲಸೆಯನ್ನು ನೋಡಬಹುದು. ಈ ಮಧ್ಯೆ ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಗೆಲಲ್ಲಬೇಕಾಗಿದೆ. ಒಂದು ವೇಳೆ ಪಂಜಾಬ್ ನಲ್ಲಿ ನಾವು ಸೋತರೆ ನಾವು ಅದು ದೊಡ್ಡ ಹಿನ್ನಡೆಯಾಗುತ್ತದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದರು.
ಪಕ್ಷ ಬದಲಾಗಿದೆ ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ನಾಯಕತ್ವದ ಕೊರತೆಯಿದೆ ಎಂದು ಪಕ್ಷ ತೊರೆಯುತ್ತಿರುವ ಮುಖಂಡರು ಹೇಳುತ್ತಿದ್ದಾರೆ. ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತರು ಸೇರಿದಂತೆ ಅನೇಕ ನಾಯಕರು ನಿರ್ಗಮಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಮತ್ತೊಬ್ಬ ಯುವ ನಾಯಕ ಮಿಲಿಂದ್ ದಿಯೋರಾ ಕೂಡ ಟ್ರ್ಯಾಕ್ ಬದಲಾಯಿಸುವ ಸಾಧ್ಯತೆ ಇದೆ ಎಂಬ ಗುಸುಗುಸು ಇದೆ. ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆಗೆ ಮುಂಚಿತವಾಗಿ ಹೊಸ ಪಕ್ಷ ಕಟ್ಟುವ ಸಾಧ್ಯತೆಯೂ ಇದೆ.
“ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಗುಜರಾತ್‌ನಲ್ಲಿ ಪಕ್ಷದಿಂದ ಹಲವರ ನಿರ್ಗಮನ ನಡೆಯಲಿದೆ. ಅನೇಕ ನಾಯಕರು ಇತರ ಪಕ್ಷಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಪಕ್ಷದ ಯಾವುದೇ ತಪ್ಪು ನಡೆ ಅದರ ಭವಿಷ್ಯವನ್ನು ಘಾಸಿಗೊಳಿಸಬಹುದು ಎಂದು ಮತ್ತೊಬ್ಬ ನಾಯಕ ಹೇಳಿದರು.
ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ತನ್ನ 89 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ ಶೇಕಡಾ 40 ಸ್ಥಾನಗಳನ್ನು ಮೀಸಲಿಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷವು ಈಗಾಗಲೇ 255 ಅಭ್ಯರ್ಥಿಗಳನ್ನು ಘೋಷಿಸಿದೆ. ಅದರ ಮೊದಲ ಪಟ್ಟಿಯಲ್ಲಿ 125 ಅಭ್ಯರ್ಥಿಗಳು ಮತ್ತು ಎರಡನೇ ಪಟ್ಟಿಯಲ್ಲಿ 41 ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ 37 ಮಹಿಳೆಯರಿದ್ದಾರೆ. ಕಾಂಗ್ರೆಸ್ ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಕ್ರಮವಾಗಿ 50 ಮತ್ತು 16 ಮಹಿಳೆಯರಿಗೆ ಟಿಕೆಟ್ ನೀಡಲಾಗಿತ್ತು.