HEALTH TIPS

ಗಣರಾಜ್ಯೋತ್ಸವ ಸಂಭ್ರಮ; ಕೇರಳದಲ್ಲಿ ನಿರ್ಬಂಧಗಳೊಂದಿಗೆ ಆಚರಣೆ: ತಿರುವನಂತಪುರದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

                                            

              ತಿರುವನಂತಪುರ: ದೇಶವು 73ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. ಕೊರೋನಾ ಮೂರನೇ ತರಂಗವು ಗಂಭೀರ ಸವಾಲನ್ನು ಒಡ್ಡಿರುವ ಈಗಿನ ಸನ್ನಿವೇಶ|ದಲ್ಲಿ, ಕಠಿಣ ನಿರ್ಬಂಧಗಳೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೇರಳದಲ್ಲೂ ಆಚರಣೆಗೆ ನಿರ್ಬಂಧ ಹೇರಲಾಗಿದೆ. ತಿರುವನಂತಪುರದ ಸೆಂಟ್ರಲ್ ಸ್ಟೇಡಿಯಂನಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದರು. 

                   ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ರಾಜ್ಯಪಾಲರನ್ನು ಬರಮಾಡಿಕೊಂಡರು. ಕೊರೋನಾ ಹಿನ್ನೆಲೆಯಲ್ಲಿ ಆಹ್ವಾನಿತ ಅತಿಥಿಗಳಿಗೆ ಸೆಂಟ್ರಲ್ ಸ್ಟೇಡಿಯಂಗೆ ಪ್ರವೇಶ ನೀಡಲಾಗಿತ್ತು. ಕೊರೊನಾ ಚಿಕಿತ್ಸೆಗೆ ಒಳಗಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲ ಸಚಿವರಿಗೆ ಆಯಾ ಜಿಲ್ಲೆಗಳ ಜನಪ್ರತಿನಿಧಿಗಳನ್ನು ಪ್ರತಿನಿಧಿಸುವ ಜವಾಬ್ದಾರಿ ನೀಡಲಾಗಿದೆ.

               ಜಗತ್ತಿನಾದ್ಯಂತ ಇರುವ ಕೇರಳೀಯರಿಗೆ ರಾಜ್ಯಪಾಲರು ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ‘ನಾವು ಭಾರತೀಯರು ಇಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಂತೋಷ ಮತ್ತು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವದ ಪವಿತ್ರ ಗ್ರಂಥವಾದ ಸಂವಿಧಾನ ಅಸ್ತಿತ್ವಕ್ಕೆ ಬಂದ ಹೆಮ್ಮೆಯ ಕ್ಷಣದ ಆಚರಣೆಯೇ ಗಣರಾಜ್ಯೋತ್ಸವ. ನವ ಭಾರತದ ಶಿಲ್ಪಿಗಳು ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರ ಬಗ್ಗೆ ನಮ್ಮ ಅಭಿಮಾನದಲ್ಲಿ ಪ್ರಜಾಪ್ರಭುತ್ವದ ಮೇಲಿನ ನಮ್ಮ ಅಚಲ ನಂಬಿಕೆಯು ಸ್ಪಷ್ಟವಾಗಿದೆ. ಕೊರೋನಾ ವಿಸ್ತರಣೆಯಿಂದಾಗಿ ಗಣರಾಜ್ಯೋತ್ಸವದ ಆಚರಣೆಗಳನ್ನು ಸೀಮಿತಗೊಳಿಸಲಾಗಿತ್ತು.  ಆದರೆ ನಮ್ಮ ದೇಶ ಮತ್ತು ನಮ್ಮ ಪ್ರೀತಿಯ ರಾಜ್ಯವು ಸಾಧಿಸಿರುವ ಪ್ರಗತಿಯಲ್ಲಿ ನಮ್ಮ ಹೆಮ್ಮೆಯು ಅಳೆಯಲಾಗದು ಎಂದು ರಾಜ್ಯಪಾಲರು ಹೇಳಿದರು.

             ಕೊರೋನಾ ರಕ್ಷಣೆಯಲ್ಲಿ ನಮ್ಮ ಒಗ್ಗಟ್ಟಿನ ಕ್ರಮವು ಇತರ ದೇಶಗಳಿಗೆ ಮಾದರಿಯಾಗಿದೆ. ವ್ಯಾಕ್ಸಿನೇಷನ್‍ನಲ್ಲಿ ದೇಶದ ಸಾಧನೆಗಳು ಇದಕ್ಕೆ ಉದಾಹರಣೆಯಾಗಿದೆ. ಕೇರಳ ಮಾದರಿಯು ತನ್ನ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಹೆಮ್ಮೆಪಡುತ್ತದೆ ಮತ್ತು ವ್ಯಾಕ್ಸಿನೇಷನ್‍ನಲ್ಲಿ ರಾಜ್ಯದ ಸಾಧನೆಗಳು ದೊಡ್ಡದಾಗಿದೆ ಎಂದು ರಾಜ್ಯಪಾಲರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries