ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 14ನೇ ಪಂಚ ವಾರ್ಷಿಕ ಪದ್ಧತಿಯ 2022-2027 ಅಭಿವೃದ್ದಿ ವಿಚಾರ ಸಂಕಿರಣ ಪಂಚಾಯತ್ ಸಭಾಂಗಣದಲ್ಲಿ ಜರಗಿತು.ಈ ಸಂದರ್ಭದಲ್ಲಿ 13ನೇ ಪಂಚ ವಾರ್ಷಿಕ ಯೋಜನೆಯ ಅವಲೋಕನ ಹಾಗೂ 14ನೇ ಪಂಚ ವಾರ್ಷಿಕದ ವಿವಿಧ ಅಭಿವೃದ್ಧಿ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ವಿಚಾರ ಸಂಕಿರಣ ಉದ್ಘಾಟಿಸಿದರು. ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಹಂಸಾರ್ ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಅರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಧಾಬಿ ಹನೀಫ್, ವಿವಿಧ ವಾರ್ಡ್ ಸದಸ್ಯರಾದ ಮಹೇಶ್ ಭಟ್, ಶಶಿಧರ್, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಾಧಾಕೃಷ್ಣ ನಾಯಕ್,ಕುಸುಮಾವತಿ, ಝರಿನಾ ಎಂ, ಉಷಾ, ಆಶಾಲತ,ಇಂದಿರಾ ಮೊದಲಾದವರು ಉಪಸ್ಥಿತರಿದ್ದರು.
ಹೆಡ್ ಕ್ಲಾರ್ಕ್ ಪ್ರೇಮನ್ ವರದಿ ಮಂಡಿಸಿದರು. ಸಿನೀಯರ್ ಕ್ಲಾರ್ಕ್ ಲಿಗೇಶ್ ಸ್ವಾಗತಿಸಿ,ಸಿನೀಯರ್ ಕ್ಲಾರ್ಕ್ ಕರುಣಾಕರನ್ ವಂದಿಸಿದರು.