ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಶಿಯೇಶನ್ ಕುಂಬಳೆ ಉಪಜಿಲ್ಲಾ ಸಮ್ಮೇಳನ ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲ ದಲ್ಲಿ ಜರುಗಿತು. ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಧ್ವಜಾರೋಹಣಗೈದರು. ಬಳಿಕ ಉದ್ಘಾಟನಾ ಸಮಾರಂಭ ಜರಗಿತು. ಸಮ್ಮೇಳನದ ಉದ್ಘಾಟನೆಯನ್ನು ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಮಾಸ್ತರ್ ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೌನ್ಸಿಲರ್ ಗಳಾದ ರಾಜೀವ್ ಮಾಸ್ತರ್,ಯೂಸುಫ್ ಮಾಸ್ತರ್, ರಾಜ್ಯ ಸಮಿತಿ ಸದಸ್ಯ ದಾಮೋದರ ಮಾಸ್ತರ್, ಜಿಲ್ಲಾ ಕೋಶಾಧಿಕಾರಿ ಪ್ರಶಾಂತ್ ಕಾನತ್ತೂರು, ಉಪಾಧ್ಯಕ್ಷ ಅಶೋಕ್ ಮಾಸ್ತರ್, ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾಧ್ಯಕ್ಷ ಬೆನ್ನಿ ಮಾಸ್ತರ್, ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಕೋಶಾಧಿಕಾರಿ ಅರವಿಂದ ಮಾಸ್ತರ್ ಕಾರ್ಯಕ್ರಮಕ್ಕೆ ಶುಭಾಶಂಸನೆಗೈದರು. ಬಿಂದು ಟೀಚರ್ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ರಾಧಾಕೃಷ್ಣನ್ ಸ್ವಾಗತಿಸಿ, ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು.
ಬಳಿಕ ಪ್ರತಿನಿಧಿ ಸಮ್ಮೇಳನ, ಸಂಘಟನಾ ಚರ್ಚೆ ನಡೆಯಿತು. ವಾರ್ಷಿಕ ವರದಿ ಆಯವ್ಯಯ ಮಂಡನೆ ನಡೆಯಿತು. ಕುಂಬಳೆ ಉಪಜಿಲ್ಲಾ ನೂತನ ಸಮಿತಿ ರೂಪಿಸಲಾಯಿತು. ಅಧ್ಯಕ್ಷರಾಗಿ ಜಲಜಾಕ್ಷಿ ಟೀಚರ್, ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ್ ರೈ ಪೆರಡಾಲ, ಕೋಶಾಧಿಕಾರಿಯಾಗಿ ಮಲ್ಲಿಕಾ ಟೀಚರ್ ಆಯ್ಕೆಯಾದರು. 15 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.