ಉಪ್ಪಳ: ಕೊಂಡೆವೂರು ಶ್ರೀಗಳಾದ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ಭಾನುವಾರ ಮಧ್ಯಾಹ್ನ ಕೆದಂಬಾಡಿ ಗ್ರಾಮದ ಕೊರಗ ಸಮುದಾಯದ ಕಾಲನಿ ಯಲ್ಲಿ ಪಾದಯಾತ್ರೆ ನಡೆಸಿ ಕೊರಗ ಬಂದುಗಳ ಮನೆ ಭೇಟಿ ನೀಡಿದರು. ಸಂಜೆ ನಡೆದ ಭಜನಾ ಸತ್ಸಂಗ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಯಾವತ್ತೂ ಸಮಾಜದ ಎಲ್ಲಾ ಕಷ್ಟ ಸುಖಗಳಿಗೆ ಜೊತೆಯಾಗಿ ಇರುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ನಡೆದ ಭಜನಾ ಕಾರ್ಯಕ್ರಮವನ್ನು ನಿರೋಳಿಕೆ ಶ್ರೀ ಮಾತಾ ಸೇವಾಶ್ರಮದ ಮಕ್ಕಳು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಂಘ ಚಾಲಕ ಗೋಪಾಲ್ ಚೆಟ್ಟಿಯಾರ್, ಪ್ರಮುಖರಾದ ತಿಮ್ಮಪ್ಪ ಮೀಯಪದವು, ನಾರಾಯಣ ಭಟ್ ತಲೆಂಗಳ, ಹರಿಕಿಶೋರ್ ಕಾಸರಗೋಡು, ಜಯಪ್ರಕಾಶ್ ಬಂಬ್ರಾಣ, ಐತಪ್ಪ ಶೆಟ್ಟಿ ದೇವಂಡಪಡ್ಪ್ಪು, ಚಂದ್ರಹಾಸ್ ಪೂಜಾರಿ ಮುಡಿಮಾರ್ ಉಪಸ್ಥಿತರಿದ್ದರು .
ರವಿ ಮುಡಿಮಾರ್ ಸ್ವಾಗತಿಸಿ,ಯತಿರಾಜ್ ಶೆಟ್ಟಿ ಕೆದುಂಬಾಡಿ ವಂದಿಸಿದರು.