HEALTH TIPS

ಕ್ಲಬ್ ಹೌಸ್‍ನಲ್ಲಿ ಉಗ್ರಗಾಮಿ ಚರ್ಚೆ: ಆತಂಕದಲ್ಲಿ ಕೇರಳದ ಜನತೆ

             ಕೊಚ್ಚಿ: ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ಹೆಚ್ಚು ಜನರನ್ನು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿರುವ  ಕ್ಲಬ್ ಹೌಸ್ ಮೂಲಕ ಉಗ್ರಗಾಮಿ ಚರ್ಚೆಗಳು ವ್ಯಾಪಕಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.

                   ಕಾಸರಗೋಡು ಸೇರಿದಂತೆ ರಾಜ್ಯದ ಏಳಕ್ಕೂ ಹೆಚ್ಚು ಕೇಂದ್ರಗಳಲ್ಲಿ ಉಗ್ರಗಾಮಿ ಪರ ಚರ್ಚೆಗಳನ್ನು ಆಯೋಜಿಸುವ ಮೂಲಕ ತಮ್ಮ ಪರ ಒಂದು ಸಮುದಾಯದ ಒಲವು ಹೆಚ್ಚಿಸಿಕೊಳ್ಳುವಲ್ಲಿ ಈ ಗುಂಪು ಶ್ರಮಿಸುತ್ತಿರುವುದಾಗಿ ಕೇಂದ್ರ ಇಂಟೆಲಿಜೆನ್ಸ್ ಏಜನ್ಸಿಗಳು ವರದಿ ಮಾಡಿದೆ. ಕಾಸರಗೋಡು, ಕೋಯಿಕ್ಕೋಡ್, ಕೊಲ್ಲಂ, ಆಲಪ್ಪುಳ, ತೃಶ್ಯೂರ್ ಜಿಲ್ಲೆಗಳ ವಿವಿಧ ಕೇಂದ್ರಗಳಲ್ಲಿ ಈ ರೀತಿಯ ಕ್ಲಬ್ ಹೌಸ್‍ಗಳು ಚರ್ಚೆ ಆಯೋಸುತ್ತಿದ್ದು, ಈ ಮೂಲಕ ಭಯೋತ್ಪಾದನಾ ತಂಡಗಳತ್ತ ಆಕರ್ಷಿಸಲೂ ಯತ್ನಿಸುತ್ತಿದೆ. ಜತೆಗೆ ಕೋಮು ಭಾವನೆ ಕೆರಳಿಸಲು, ದ್ವೇಷ ಭಾವನೆ ಹೆಚ್ಚಿಸಲೂ ಸಾಮಾಜಿಕ ಮಾಧ್ಯಮ ತಾಣ ಕ್ಲಬ್‍ಹೌಸನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಲಭಿಸಿದ ಮಾಃಇತಿಯನ್ವಯ ಎನ್‍ಐಎ ಇಂಟೆಲಿಜೆನ್ಸ್ ಬ್ಯೂರೋ, ಮಿಲಿಟರಿ ಇಂಟೆಲಿಜೆನ್ಸ್ ಏಜನ್ಸಿಗಳು ನಿಗಾವಹಿಸುತ್ತಿರುವುದಾಗಿ ಮಾಹಿತಿಯಿದೆ.

                   ಓಪನ್, ಕ್ಲೋಸ್ಡ್ ಎಂಬ ಎರಡು ರೀತಿಯ ಕೊಠಡಿಗಳಿರುವ ಕ್ಲಬ್ ಹೌಸ್‍ನಲ್ಲಿ ಸಾಮಾನ್ಯ ಚರ್ಚೆಗಳು ಓಪನ್ ಕೊಠಡಿಯಲ್ಲಿ ನಡೆಯುತ್ತಿದ್ದರೆ, ಅತ್ಯಂತ ತೀವ್ರ ಸ್ವರೂಪದ ಚರ್ಚೆ, ಯೋಜನೆಗಳು ಕ್ಲೋಸ್ಡ್ ಕೊಠಡಿಯಲ್ಲಿ ನಡೆಯುತ್ತಿದ್ದು, ಇದರಲ್ಲಿ ಪಕ್ಕಾ ಉಗ್ರಗಾಮಿ ಆಶಯ ಹೊಂದಿದವರಿಗೆ ಮಾತ್ರ ಪ್ರವೇಶಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವ ರೀತಿಯಲ್ಲಿ  ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇರಳದಿಂದ ಅತಿ ಹೆಚ್ಚು ಮಂದಿ ಐಸಿಸ್ ಸೇರಿದಂತೆ ಇತರ ಜಾಗತಿಕ ಭಯೋತ್ಪಾದಕ ಸಂಘಟನೆಗಳಿಗೆ ಸೇರ್ಪಡೆಗೊಂಡಿರುವುದಲ್ಲದೆ, ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವವರ ಸಂಖ್ಯೆಯೂ ಹೆಚ್ಚಾಗಿದೆ. 

ಸಾಮಾಜಿಕ ಜಾಲ ತಾಣಗಳ ಬಗ್ಗೆ ಪೊಲೀಸ್ ಇಲಾಖೆ ಸದಾ ನಿಗಾ ವಹಿಸುತ್ತಿದೆ. ಕ್ಲಬ್ ಹೌಸ್ ಮೂಲಕ ಉಗ್ರಗಾಮಿ ಚರ್ಚೆ ನಡೆಯುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಪ್ರತ್ಯೇಕ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಗಮನ ಹರಿಸುವುದಾಗಿ ಕಾಸರಗೋಡು ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ಚಂದ್ರ ನಾಯ್ಕ್  ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries