ಚೆನ್ನೈ: ನಟ ದಿಲೀಪ್ ಪ್ರಮುಖ ಆರೋಪಿಯಾಗಿರುವ ಮಾಲಿವುಡ್ ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆ ತಾನು ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಚೆನ್ನೈ: ನಟ ದಿಲೀಪ್ ಪ್ರಮುಖ ಆರೋಪಿಯಾಗಿರುವ ಮಾಲಿವುಡ್ ಲೈಂಗಿಕ ಕಿರುಕುಳ ಪ್ರಕರಣದ ಸಂತ್ರಸ್ತೆ ತಾನು ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಚಿತ್ರ ನಿರ್ದೇಶಕ ಪಿ ಬಾಲಚಂದ್ರ ಕುಮಾರ್ ಅವರು ನೀಡಿದ ಮಾಹಿತಿಯಂತೆ ಸಂತ್ರಸ್ತೆ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ ಹೇಳಿಕೆಯೊಂದನ್ನು ಪೋಸ್ಟ್ ಮಾಡಿ ತನಗೆ ಬೆಂಬಲ ನೀಡಿದವರಿಗೆಲ್ಲಾ ಧನ್ಯವಾದ ತಿಳಿಸಿ ತಮ್ಮ ಮೌನ ಮುರಿದಿದ್ದಾರೆ.
ಈ ಘಟನೆಗೆ ತಾನು ಕಾರಣವಲ್ಲದೇ ಇದ್ದರೂ ತನ್ನನ್ನು ಅವಮಾನಿಸುವ, ತನ್ನ ಸದ್ದಡಗಿಸುವ ಯತ್ನಗಳು ನಡೆದಿದ್ದವು. ಈ ಸಂದರ್ಭ ಕೆಲವರು ಬೆಂಬಲವಾಗಿ ನಿಂತು ತಮ್ಮ ಪರವಾಗಿ ಮಾತನಾಡಿದ್ದಾರೆ. ಅಂತಹವರಿಗೆಲ್ಲಾ ಧನ್ಯವಾದ ಎಂದು ಆಕೆ ಬರೆದಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದೇ ಇರಲಿ ಎಂಬ ಕಾರಣಕ್ಕಾಗಿ ತಮ್ಮ ಹೋರಾಟ ಮುಂದುವರಿಸುವುದಾಗಿ ಆಕೆ ಬರೆದಿದ್ದಾರೆ.
ಫೆಬ್ರವರಿ 10, 2017ರಂದು ಘಟನೆ ನಡೆದಿತ್ತು. ಮಲಯಾಳಂ ನಟಿಯಾಗಿರುವ ಸಂತ್ರಸ್ತೆಯನ್ನು ಆ ರಾತ್ರಿ ಅಪಹರಿಸಿ, ಚಲಿಸುತ್ತಿರುವ ಕಾರಿನಲ್ಲಿ ಆಕೆಯ ಮೇಲೆ ಸುಮಾರು ಎರಡು ಗಂಟೆಗಳ ಕಾಲ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಆರೋಪಿಸಲಾಗಿದೆ. ಆರೋಪಿಗಳಲ್ಲಿ ಪಲ್ಸರ್ ಸೋನಿ ಕೂಡ ಸೇರಿದ್ದರು.
ದಿಲೀಪ್ ಅವರನ್ನು ಜುಲೈ 10, 2017ರಂದು ಬಂಧಿಸಿಲಾಗಿತ್ತು. ನಂತರ ಅದೇ ವರ್ಷದ ಅಕ್ಟೋಬರ್ 3ರಂದು ಅವರು ಹೈಕೋರ್ಟಿನಿಂದ ಜಾಮೀನು ಪಡೆದಿದ್ದರು.