ಮುಳ್ಳೇರಿಯ: ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ 450 ಶತಮಾನಗಳಷ್ಟು ಪುರಾತನ ಮುಳ್ಳೇರಿಯದಲ್ಲಿನ ಪ್ರಸಿದ್ಧ ಶತ್ರು ನಿಗ್ರಹ ಕ್ಷೇತ್ರ ತಲೆಬೈಲು ಶ್ರೀ ನರಸಿಂಹ ದೇವರ ಮಠದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಯುಷ್ಯ ಮತ್ತು ಆರೋಗ್ಯ ವೃದ್ಧಿಗಾಗಿ ಮಂಜುನಾಥ ಉಡುಪ ಕುಂಟಾರು ಮತ್ತು ಮಂಜುನಾಥ ಐತಾಳ್ ಉಬ್ರಂಗಳ ಅವರ ಪೌರೋಹಿತ್ಯದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು, ಯುವ ಮೋರ್ಚಾ ರಾಜ್ಯ ಮಹಿಳಾ ವಿಭಾಗ ಸಂಚಾಲಕಿ ಅಂಜು ಜೋಸ್ತಿ, ಪ್ರಧಾನ ಕಾರ್ಯದರ್ಶಿಗಳಾದ ಕೀರ್ತನ್ ಜೆ.ಕೂಡ್ಲು, ರಕ್ಷಿತ್ ಕೆದಿಲಾಯ, ಕಾರ್ಯದರ್ಶಿ ಆಗ್ನೇಶ್, ಕಾಸರಗೋಡು ಮಂಡಲ ಅಧ್ಯಕ್ಷ ಅಜಿತ್ ಕುಮಾರನ್, ಮಂಡಲ ಉಪಾಧ್ಯಕ್ಷ ಮನೋಜ್ ಕೂಡ್ಲು, ಬದಿಯಡ್ಕ ಮಂಡಲ ಅಧ್ಯಕ್ಷ ಪ್ರಮೋದ್ ಭಂಡಾರಿ, ಯುವ ಮೋರ್ಚಾ ಕಾರಡ್ಕ ಪಂಚಾಯತಿ ಸಮಿತಿ ಅಧ್ಯಕ್ಷ ರಾಜೇಶ್,ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಂಜೀವ ಶೆಟ್ಟಿ ,ಬಿಜೆಪಿ ಬದಿಯಡ್ಕ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನೀಲ್, ಗೋಪಾಲಕೃಷ್ಣ, ಮಂಡಲ ಕೋಶಾಧಿಕಾರಿ ಮಹೇಶ್ ವಳಕ್ಕುಂಜ, ಬಿಜೆಪಿ ಬೆಳ್ಳೂರು ಪಂಚಾಯತಿ ಸಮಿತಿ ಅಧ್ಯಕ್ಷ ಜಯಾನಂದ ಕುಳ ಮೊದಲಾದವರು ಉಪಸ್ಥಿತರಿದ್ದರು.