HEALTH TIPS

ವರ್ಷಾರಂಭದಲ್ಲಿ ಸೆನ್ಸೆಕ್ಸ್ ಸಕಾರಾತ್ಮಕ ವಹಿವಾಟು; ಐಟಿ, ಇಂಧನ ಷೇರುಗಳ ಮೌಲ್ಯ ಹೆಚ್ಚಳ

   ಮುಂಬೈ: ಹೊಸ ವರ್ಷದ ಆರಂಭಿಕ ದಿನದ ವಹಿವಾಟಿನಲ್ಲಿಯೇ ಭಾರತೀಯ ಷೇರು ಮಾರುಕಟ್ಟೆ ಚೇತೋಹಾರಿ ವ್ಯವಹಾರ ನಡೆಸಿದ್ದು, ಐಟಿ, ಇಂಧನ ಷೇರುಗಳ ಮೌಲ್ಯ ಹೆಚ್ಚಳಕಂಡಿದೆ.

    ಭಾರತೀಯ ಷೇರು ಮಾರುಕಟ್ಟೆಯು ಸೋಮವಾರ ಧನಾತ್ಮಕ ಟಿಪ್ಪಣಿಯೊಂದಿಗೆ 2022 ವರ್ಷವನ್ನು ಪ್ರಾರಂಭಿಸಿದ್ದು, ಐಟಿ ಮತ್ತು ಇಂಧನ ಷೇರುಗಳಲ್ಲಿನ ತೀವ್ರ ಖರೀದಿಯ ಕಾರಣದಿಂದಾಗಿ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 340 ಪಾಯಿಂಟ್‌ಗಳ ಏರಿಕೆಯಾಗಿದೆ. ಇದೇ ಪ್ರವೃತ್ತಿ ಮತ್ತಷ್ಟು ಸಮಯ ಮುಂದುವರೆದು, ಸೆನ್ಸೆಕ್ಸ್ 339.44 ಪಾಯಿಂಟ್‌ಗಳಷ್ಟು ಅಂದರೆ ಶೇ.0.58ರಷ್ಟು ಏರಿಕೆಕಂಡು ತನ್ನ ಅಂಕಗಳ ಗಳಿಕೆಯನ್ನು  58,593.26ಕ್ಕೆ ಏರಿಕೆ ಮಾಡಿಕೊಂಡು ವಹಿವಾಟು ನಡೆಸುತ್ತಿದೆ. 

      ಅಂತೆಯೇ, ಎನ್‌ಎಸ್‌ಇ ನಿಫ್ಟಿ ಆರಂಭಿಕ ವ್ಯವಹಾರಗಳಲ್ಲಿ 108.90 ಪಾಯಿಂಟ್‌ಗಳು ಅಥವಾ 0.63 ಶೇಕಡಾ ಏರಿಕೆಯಾಗಿ 17,462.95 ಕ್ಕೆ ವಹಿವಾಟು ನಡೆಸಿದೆ. ಇಂದಿನ ವಹಿವಾಟಿನಲ್ಲಿ ಟಿಸಿಎಸ್, ಮಾರುತಿ, ಎಚ್‌ಸಿಎಲ್ ಟೆಕ್, ಎಲ್ & ಟಿ, ಟೆಕ್ ಮಹೀಂದ್ರಾ ಮತ್ತು ವಿಪ್ರೋ ಪ್ರಮುಖ ಲಾಭ ಗಳಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಇಂಡಸ್‌ಇಂಡ್ ಬ್ಯಾಂಕ್, ಎಂ & ಎಂ, ಟೈಟಾನ್, ಡಾ ರೆಡ್ಡೀಸ್ ಮತ್ತು ಎಚ್‌ಯುಎಲ್ ನ ಷೇರುಗಳ ಮೌಲ್ಯ ಅಲ್ಪ ಕುಸಿದಿದ್ದು, ನಕಾರಾತ್ಮಕ ರೇಖೆಯಲ್ಲಿ ವಹಿವಾಟು ನಡೆಸುತ್ತಿವೆ. ವಲಯವಾರು, ಬಿಎಸ್‌ಇ ಆಟೋ, ಐಟಿ ಮತ್ತು ಫಾರ್ಮಾ ಸೂಚ್ಯಂಕಗಳು ಗಮನಾರ್ಹ ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ.

       ಶುಕ್ರವಾರ ನಡೆದ ವರ್ಷದ ಕೊನೆಯ ವಹಿವಾಟಿನಲ್ಲೂ ಷೇರುಮಾರುಕಟ್ಟೆ ಸಾಕಾರಾತ್ಮಕ ವಹಿವಾಟಿನೊಂದಿಗೆ ವಾರದ ವ್ಯವಹಾರ ಮತ್ತು ವರ್ಷವನ್ನು ಕೊನೆಗೊಳಿಸಿತ್ತು.  

    ಏತನ್ಮಧ್ಯೆ, ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 0.69 ರಷ್ಟು ಏರಿಕೆಯಾಗಿ 78.24 ಡಾಲರ್ ಗೆ ತಲುಪಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries