ಬದಿಯಡ್ಕ: ಹಲವು ವರ್ಷಗಳ ಪರಿಶ್ರಮದ ಫಲವಾಗಿ ಇಂದು ಪಾಂಚಜನ್ಯ ಲೋಕಾರ್ಪಣೆಗೊಂಡಿದೆ. ಎಲ್ಲರನ್ನೂ ಒಂದುಗೂಡಿಸುವಲ್ಲಿ ಭಜನಾಮಂದಿರಗಳು ಮುಂದುವರಿಯುತ್ತಿರುವುದು ಶ್ಲಾಘನೀಯವಾಗಿದೆ. ಪಾಂಚಜನ್ಯವು ಹಿಂದೂ ಸಮಾಜದ ಭವ್ಯ ಮಂದಿರವಾಗಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನವನ್ನು ನೀಡಿದರು.
ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ `ಪಾಂಚಜನ್ಯ' ಭೋಜನ ಶಾಲೆ ಮತ್ತು ಸಭಾ ಭವನವನ್ನು ಶನಿವಾರ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಭಜನೆಯೇ ಸುಲಭದ ದಾರಿಯಾಗಿದೆ. ಈ ಸಭಾ ಭÀವನದ ಮೂಲಕ ಸಮಾಜದ ಏಳಿಗೆಯಾಗಲಿ, ನಮ್ಮ ಸಂಸ್ಕøತಿ, ಸಂಸ್ಕಾರಕ್ಕೆ ಪೂರಕವಾದ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಹರಸಿದರು.
ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಮಂಡಳಿ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಭಾಷಣದಲ್ಲಿ ಎಲ್ಲರ ಎಲ್ಲ ರೀತಿಯ ಸಹಕಾರದ ಮೂರ್ತರೂಪವಾಗಿ ಕಟ್ಟಡವು ತಲೆಯೆತ್ತಿದೆ. ಶತ್ರುವಿನಲ್ಲಿರುವ ಶತ್ರುತ್ವ ಭಾವನೆ ಇಲ್ಲದಂತಾಗಿ ಉತ್ತಮ ಚಿಂತನೆಗಳು ಮೂಡಿಬರಲಿ ಎಂಬ ಚಿಂತನೆಯೊಂದಿಗೆ ನಾವು ದೀಪವನ್ನು ಬೆಳಗುತ್ತಿದ್ದೇವೆ ಎಂಬುದಾಗಿ ಹೇಳಿದರು.
ಪ್ರಖ್ಯಾತ ಚಿಂತಕ ಲೇಖಕ ರಾಮ್ ಮಾಧವ್ ಮಕರ ಸಂಕ್ರಮಣದ ಶುಭ ಕೋರಿ ಮಾತನಾಡಿ ಮಂದಿರದೊಂದಿಗೆ ಹೊಂದಿಕೊಂಡಿರುವಂತೆ ಸಭಾ ಭವನ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇದರ ಪರಿಕಲ್ಪನೆ, ಯೋಜನೆ ಅದ್ಭುತವಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮವ್ವಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೊಕ್ತೇಸರ ಪುರುಷೋತ್ತಮ ಭಟ್ ಮವ್ವಾರು, ಅಗಲ್ಪಾಡಿ ಕ್ಷೇತ್ರದ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ, ಕುಂಬ್ಡಾಜೆ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ಡಾ. ಕೃಷ್ಣಕುಮಾರಿ, ಉಬ್ರಂಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಕಿಶೋರ್ ಕುಣಿಕುಳ್ಳಾಯ, ಗೋಸಾಡ ಕ್ಷೇತ್ರದ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ, ಉದ್ಘಾಟನಾ ಸಮಿತಿಯ ಕಾರ್ಯಾಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಅಗಲ್ಪಾಡಿ ಕ್ಷೇತ್ರದ ಮೊಕ್ತೇಸರ ಎ.ಜಿ.ಶರ್ಮ ಕೋಳಿಕ್ಕಜೆ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಅಧ್ಯಕ್ಷ ನಾರಾಯಣ ಕಾಟುಕುಕ್ಕೆ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಸೇವಾಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ, ಅಗಲ್ಪಾಡಿ ಯಾದವ ಸೇವಾಸಂಘದ ಅಧ್ಯಕ್ಷ ಸುಧಾಮ ಪದ್ಮಾರು, ಪ್ರೊ.ಎ.ಶ್ರೀನಾಥ್, ಕೃಷ್ಣಮೂರ್ತಿ, ನಾರಾಯಣ ಮಣಿಯಾಣಿ ಚೋಕೆ, ಬಾಬುಮಣಿಯಾಣಿ ಜಯನಗರ, ಉದಯ ಕುಮಾರ್ ಕಲ್ಲಕಟ್ಟ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಕಾರ್ಯದರ್ಶಿ ಅಚ್ಚುತ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಣೆಗೈದರು. ಪ್ರಾತಃಕಾಲ ಅಷ್ಟನಾಳಿಕೇರ ಮಹಾಗಣಪತಿ ಹೋಮ, ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಇಂದು (ಜ.16) ಸಮಾರೋಪ ಸಮಾರಂಭ ನಡೆಯಲಿದೆ.