ತಿರುವನಂತಪುರ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ ಕೇರಳ ವಿಶ್ವವಿದ್ಯಾಲಯದ ಉಪಕುಲಪತಿಗಳ ವಿರುದ್ಧ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಉಪಕುಲಪತಿಗಳು ಕುಲಪತಿಗಳಿಗೆ ಅವಮಾನ ಮಾಡಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ. ನಂತರ ಮುಖ್ಯಮಂತ್ರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಅವರು ಇಂದು ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರಪತಿಗಳಿಗೆರ ಡಿ.ಲಿಟ್ ನೀಡಲು ಸಾಧ್ಯವಿಲ್ಲ ಎಂದು ವಿಸಿ ದೂರವಾಣಿ ಕರೆಯಲ್ಲಿ ತಿಳಿಸಿದ್ದಾರೆ. ನಂತರ ಈ ವಿಷಯವನ್ನು ಲಿಖಿತವಾಗಿ ನೀಡುವಂತೆ ತಿಳಿಸಲಾಯಿತು. ಆದರೆ ಆ ಪತ್ರವನ್ನು ನೋಡಿದಾಗ ನನಗೆ ಆಘಾತವಾಯಿತು. ನನಗೆ ಅದರ ವಿಷಯಗಳನ್ನು ನಂಬಲಾಗಲಿಲ್ಲ. ಆಘಾತದಿಂದ ಹೊರಬರಲು ಹತ್ತು ನಿಮಿಷಗಳೇ ಬೇಕಾಯಿತು. ವಿಸಿ ಕಳುಹಿಸಿರುವ ಪತ್ರದಲ್ಲಿ ತಪ್ಪಾಗಿ ಬರೆಯಲಾಗಿದೆ. ಅದು ವಿ.ಸಿ. ಬಳಸುವ ಭಾಷೆಯೇ? ಕೇರಳ ವಿಶ್ವವಿದ್ಯಾನಿಲಯದ ಉಪಕುಲಪತಿಗಳಿಗೆ ಯಾವುದೇ ಭಾಷಾ ಕೌಶಲ್ಯವಿದೆಯೇ ಎಂದು ಅವರು ಕೇಳಿದರು.
ವಿಸಿ ಉತ್ತರಿಸಿದ ಬಳಿಕ ಮುಖ್ಯಮಂತ್ರಿಯನ್ನು ಸಂಪರ್ಕಿಸಲು ಯತ್ನಿಸಿದೆ. ಆದರೆ ಆಗಲಿಲ್ಲ. ವಿಸಿ ಬೇರೆಯವರ ಸೂಚನೆಗಳನ್ನು ಪಾಲಿಸುತ್ತಿರುವಂತೆ ತೋರುತ್ತಿತ್ತು. ರಾಷ್ಟ್ರಪತಿಗಳನ್ನು ಗೌರವಿಸಲು ಸಿಂಡಿಕೇಟ್ ಸದಸ್ಯರು ಆಕ್ಷೇಪ ಎತ್ತುತ್ತಿದ್ದಾರೆ ಎಂದು ವಿಸಿ ಹೇಳಿದರು. ಆದರೆ ನಂತರ ಸದಸ್ಯರ ಸಭೆ ಕರೆದರೂ ಈ ಬೇಡಿಕೆಗೆ ಮನ್ನಣೆ ಸಿಕ್ಕಿರಲಿಲ್ಲ.
ಕಣ್ಣೂರು ವಿಸಿ ಮರು ನೇಮಕದಲ್ಲಿ ಅಕ್ರಮ ನಡೆದಿಲ್ಲ. ಆದರೆ ಸರಿಯಾದ ವಿಧಾನವನ್ನು ಅನುಸರಿಸಿಲ್ಲ ಎಂದು ಆರಿಫ್ ಮೊಹಮ್ಮದ್ ಖಾನ್ ವಿವರಿಸಿದರು.