ಗೋವಾ: ಗೋವಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಅದರ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾದ ಪ್ರತಾಪ್‌ಸಿಂಹ ರಾಣೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ರಾಣೆ ವಿರುದ್ದ ಬಿಜೆಪಿ ಪಕ್ಷ ಅವರ ಸೊಸೆಯನ್ನೇ ಕಣಕ್ಕಿಳಿಸಿತ್ತು.
ಗೋವಾ: ಗೋವಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು, ಅದರ ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾದ ಪ್ರತಾಪ್‌ಸಿಂಹ ರಾಣೆ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ರಾಣೆ ವಿರುದ್ದ ಬಿಜೆಪಿ ಪಕ್ಷ ಅವರ ಸೊಸೆಯನ್ನೇ ಕಣಕ್ಕಿಳಿಸಿತ್ತು.
87ರ ವಯಸ್ಸಿನ ಪ್ರತಾಪ್‌ಸಿಂಹ ರಾಣೆ ಅವರು ಕುಟುಂಬದ ಒತ್ತಡವಲ್ಲ. ತಮ್ಮ ವಯಸ್ಸಿನ ಕಾರಣದಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಣೆಯವರನ್ನು ಕಾಂಗ್ರೆಸ್ ಪಕ್ಷವು ಡಿಸೆಂಬರ್‌ನಲ್ಲಿ ಪೊರಿಯಮ್ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಹೆಸರಿಸಿತು.
ಕಳೆದ ವಾರ ಬಿಜೆಪಿ ರಾಣೆಯವರ ಸೊಸೆ ದೇವಿಯ ವಿಶ್ವಜೀತ್ ರಾಣೆ ಪೊರಿಯಮ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಪೊರಿಯಮ್ ಕ್ಷೇತ್ರ ಈವರೆಗಿನ ಚುನಾವಣೆಯಲ್ಲಿ ಸೋಲು ಕಾಣದ 11 ಬಾರಿ ಶಾಸಕರಾಗಿರುವ ರಾಣೆ ಅವರ ಭದ್ರಕೋಟೆಯಾಗಿದೆ.
ರಾಣೆ ಅವರು ಗೋವಾದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಅವರ ಪುತ್ರ ವಿಶ್ವಜೀತ್ ರಾಣೆ ಗೋವಾದ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದಾರೆ.
ಕಾಂಗ್ರೆಸ್‌ನಲ್ಲಿದ್ದ ವಿಶ್ವಜೀತ್ ರಾಣೆ 2017 ರ ರಾಷ್ಟ್ರೀಯ ಚುನಾವಣೆಯ ನಂತರ ಬಿಜೆಪಿಗೆ ಪಕ್ಷಾಂತವಾಗಿದ್ದರು.
ಈ ಹಿಂದೆ ಪ್ರತಾಪ್‌ಸಿಂಹ ರಾಣೆ ಅವರು ಚುನಾವಣೆಯಿಂದ ಹಿಂದೆ ಸರಿಯುವುದನ್ನು ನಿರಾಕರಿಸಿದ್ದರು. ಪಕ್ಷವು ನನ್ನ ಹೆಸರನ್ನು ಅಭ್ಯರ್ಥಿಯಾಗಿ ಘೋಷಿಸಿದರೆ ನಾನು ಸ್ಪರ್ಧಿಸುವುದಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದ್ದರು.
ಅವರು ಶನಿವಾರವೂ ಪಣಜಿಯ ಹೋಟೆಲ್‌ನಲ್ಲಿ ಅಭ್ಯರ್ಥಿಗಳ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ್ದರು. 45 ವರ್ಷಗಳಿಂದ ಪೊರಿಯಂ ಸ್ಥಾನ ಹೊಂದಿರುವ ಕಾಂಗ್ರೆಸ್ ಗೆ ರಾಣೆ ಅವರ ಈ ನಿರ್ಧಾರ ಭಾರೀ ಹೊಡೆತ ನೀಡಬಹುದು ಎನ್ನಲಾಗಿದೆ.