ಮಂಜೇಶ್ವರ: ನಾವಡಾಸ್ ಕ್ರಿಕೆಟರ್ಸ್ ಮೀಯಪದವು ಇದರ ಆಶ್ರಯದಲ್ಲಿ ನಾವಡಾಸ್ ಟ್ರೋಫಿ ಸೀಸನ್ 3 ಬ್ರಾಹ್ಮಣರ ಕ್ರಿಕೆಟ್ ಪಂದ್ಯಾಟ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು.
ಪಂದ್ಯಾಟವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್ ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆಯ ಅಧ್ಯಕ್ಷತೆಯನ್ನು ನಾವಡಾಸ್ ತಂಡದ ಮಾಲಿಕÀ ಗಣೇಶ್ ನಾವಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿ.ಎ.ಯು.ಪಿ ಶಾಲಾ ಆಡಳಿತ ಸಲಹೆಗಾರ ಶೀಧರ್ ರಾವ್ ಆರ್ ಎಂ, ಎಸ್.ವಿ.ವಿ.ಹೆಚ್.ಎಸ್ ಶಾಲೆಯ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಹಾಗೂ ಮೀಯಪದವು ಕೂಟ ಮಹಾಜಗತ್ತು ಅಂಗ ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ರಾವ್ ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನವನ್ನು ವಿಪ್ರ ಬಾಯ್ಸ್ ಮೂಡಬಿದ್ರೆ ಹಾಗೂ ದ್ವಿತೀಯ ಬಹುಮಾನವನ್ನು ಮಾಹಾಲಿಂಗೇಶ್ವರ ಬಜಕೂಡ್ಲು ತಂಡ ಪಡೆದುಕೊಂಡಿತು. ಉತ್ತಮ ದಾಂಡಿಗನಾಗಿ ಪ್ರಮೋದ್ ಮೂಡಬಿದ್ರೆ ಉತ್ತಮ ಎಸೆತಗಾರನಾಗಿ ಮಂಜುನಾಥ ಬಜಕೂಡ್ಲು ಪಂದ್ಯ ಶ್ರೇಷ್ಠ ಹಾಗು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನರೇಶ್ ಮೂಡÀಬಿದ್ರೆ ಪಡೆದುಕೊಂಡರು.