ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯಿತಿಯ ಮಹಿಳಾ ಘಟಕದಡಿ 2600 ಕುಟುಂಬಶ್ರೀ ಸದಸ್ಯರಿಗೆ ತಲಾ ಐದು ಕೋಳಿ ಮರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಗ್ರಾಮ ಪಂಚಾಯತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಉದ್ಘಾಟಿಸಿದರು. ಉಪಾಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಸದಸ್ಯರಾದ ಅನಿತಾ ಎಂ ಹಾಗೂ ಶಾಂತಿ ವೈ ಕಾರ್ಯದರ್ಶಿ ರಾಜೇಶ್ವರಿ ಮಾತನಾಡಿದರು. ಪೃಥ್ವಿರಾಜ್ ಸ್ವಾಗತಿಸಿ, ಜಾನುವಾರು ನಿರೀಕ್ಷಕ ಶಿವದಾಸ್ ವಂದಿಸಿದರು.