ಮಕ್ಕಳು ತಪ್ಪುದಾರಿಗಿಳಿಯುವುದು, ಬಾಲಾಪರಾಧ ತಡೆಗಟ್ಟಲು, ಸೇರಿದಂತೆ ಅಪರಾಧಿಗಳು ಮಕ್ಕಳನ್ನು ಅಪರಾಧ ಕೃತ್ಯಗಳಿಗೆ ಬಳಕೆ ಮಾಡುವುದರ ವಿರುದ್ಧ ಈ ಠಾಣೆಗಳು ಕಾರ್ಯಚರಿಸಲಿವೆ.
ಬಿಹಾರ: ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಸ್ಥಾಪನೆ; ಸ್ಟೇಷನ್ ನಲ್ಲಿ ಚಾಕಲೇಟು, ಬಿಸ್ಕತ್ತುಗಳು ಯಥೇಚ್ಚ
0
ಜನವರಿ 13, 2022
ಪಾಟ್ನಾ: ಬಿಹಾರ ಪೊಲೀಸ್ ಇಲಾಖೆ ರಾಜ್ಯದಲ್ಲಿ ಮಕ್ಕಳ ಸ್ನೇಹಿ ಪೊಲೀಸ್ ಠಾಣೆಗಳನ್ನು ತೆರೆಯಲು ನಿರ್ಧರಿಸಿದೆ. ಪುರ್ನಿಯ ಮತ್ತು ನಲಂದಾ ಜಿಲ್ಲೆಗಳಲ್ಲಿ ಈಗಾಗಲೇ 'ಬಾಲ ಮಿತ್ರ ಠಾಣಾ' ಎಂಬ ಎರಡು ಮಕ್ಕಳ ಠಾಣೆಗಳು ತೆರೆಯಲ್ಪಟ್ಟಿವೆ. ಮಕ್ಕಳ ಪ್ಲೇ ಹೋಮ್ ಗಳ ಮಾದರಿಯಲ್ಲಿ ಈ ಪೊಲೀಸ್ ಸ್ಟೇಷನ್ ಗಳನ್ನು ರೂಪಿಸಲಾಗುತ್ತಿದೆ ಎನ್ನುವುದು ವಿಶೇಷ.
Tags