ಕಾಸರಗೋಡು: ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವಲ್ಲಿ ಲೋಪವೆಸಗಿದ ಪಂಜಾಬ್‍ನ ಕಾಂಗ್ರೆಸ್ ಸರ್ಕಾರ ರಾಜೀನಾಮೆ ಸಲ್ಲಿಸಿ, ದೇಶದ ಜನತೆಯ ಕ್ಷಮೆ ಯಾಚಿಸುವಂತೆ ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ. ಉಮಾ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರಿಗೆ ಭದ್ರತಾಲೋಪವೆಸಗಿದ ಕಾಂಗ್ರೆಸ್ ವಿರುದ್ಧ ಯುವಮೋರ್ಚಾ ಗುರುವಾರ ಕಾಸರಗೋಡು ನಗರದಲ್ಲಿ ಆಯೋಜಿಸಿದ್ದ ಪಂಜಿನ ಮೆರವಣಿಗೆ ಉದ್ಘಾಟಿಸಿ ಮಾತನಾಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಕನ್ವೀನರ್ ಅಂಜು ಜೋಸ್ಟಿ, ಬಿಜೆಪಿ ಮುಖಂಡ ಸುಕುಮಾರ ಕುದ್ರೆಪ್ಪಾಡಿ, ಅಶೋಕ್ ಮಧೂರ್, ಯುವಮೋರ್ಚಾ ರಾಜ್ಯ ಸಮಿತಿ ಸದಸ್ಯ ಕೀರ್ತನ್ ಜೆ ಕೂಡ್ಲು, ಜಿತೇಶ್ ಎನ್ ನೇತೃತ್ವ ನೀಡಿದರು. ಕಾಸರಗೋಡು ಕರಂದಕ್ಕಾಡಿನಿಂದ ಹೊಸ ಬಸ್ ನಿಲ್ದಾಣ ವರೆಗೆ ಮೆರವಣಿಗೆ ನಡೆಯಿತು.