ಹೈದರಾಬಾದ್: ಅಪರಿಚಿತ ವ್ಯಕ್ತಿಯ ಶಿರವೊಂದು ಕತ್ತರಿಸಿದ ಸ್ಥಿತಿಯಲ್ಲಿ ಮಹಾಕಾಳಿ ದೇವಾಲಯದಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕುರ್ಮೆಡು ಗ್ರಾಮದಲ್ಲಿ ನಡೆದಿದೆ.
ಘಟನೆ ಹಿಂದೆ ನರಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಮಹಾಕಾಳಿ ವಿಗ್ರಹದ ಪಾದದ ಬಳಿಯಲ್ಲೇ ಶಿರ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಶಿರದ ಗುರುತು ಪತ್ತೆಗಾಗಿ ಪೊಲೀಸರು ಸಿಸಿಟಿವಿ ವಿಡಿಯೊ ಪರಿಶೀಲನೆ ಸೇರಿದಂತೆ ಹಲವು ಕ್ರಮಗಳಿಗೆ ಮುಂದಾಗಿದ್ದಾರೆ. ಮುಂಜಾನೆ ಐದು ಮುಕ್ಕಾಲರ ವೇಳೆಗೆ ದೇವಾಲಯದ ಅರ್ಚಕರು ಆಗಮಿಸಿದ ಸಂದರ್ಭ ಘಟನೆ ಬಹಿರಂಗವಾಗಿದೆ.