ಮಧೂರು: ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತಲುಪುವ ವಿಶೇಷ ಚೇತನಹೊಂದಿದ ಭಕ್ತಾದಿಗಳಿಗೆ ಸೇವಾಭಾರತೀ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕೊಡಮಾಡಲಾದ ಗಾಲಿಕುರ್ಚಿಯನ್ನು ದೇವಾಲಯಕ್ಕೆ ಹಸ್ತಾಂತರಿಸಲಾಯಿತು.
ಆರೆಸ್ಸೆಸ್ ಮಂಗಳೂರು ವಿಭಾಗ ಸಂಘ ಚಾಲಕ್ ಗೋಪಾಲ ಚೆಟ್ಟಿಯಾರ್ ಪೆರ್ಲ ಗಾಲಿಕುರ್ಚಿಯನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಾಬು ಅವರಿಗೆ ಹಸ್ತಾಂತರಿಸಿದರು. ಸೇವಾಭಾರತಿ ಜಿಲ್ಲಾಧ್ಯಕ್ಷ ದಿನೇಶ್ ಎಂ.ಟಿ, ಕಾರ್ಯದರ್ಶಿ ಮೋಹನ್ ಪರಕ್ಕಿಲ, ಉಪಾಧ್ಯಕ್ಷ ಸಂಜೀವ, ಗ್ರಾಮಾಂತರ ಸಹಕಾರ್ಯವಾಹ ಸುನಿಲ್ ಕುದ್ರೆಪ್ಪಾಡಿ, ತಾಲೂಕ್ ಸೇವಾ ಪ್ರಮುಖ್ ದೀಪಕ್ ರಾಮದಾಸನಗರ ಉಪಸ್ಥಿತರಿದ್ದರು.