ಕಾಸರಗೋಡು: ನೀಲೇಶ್ವರ ನಗರಸಭೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ ಪರಿಹಾರ ಧನ ವಿತರಣಾ ಸಮಾರಂಭ ನಗರಸಭಾಂಗಣದಲ್ಲಿ ಜರುಗಿತು. ಬೀದಿನಾಯಿಗಳಿಂದ ಕಡಿತಕ್ಕೊಳಗಾದ 19ಮಂದಿಗೆ ಸಹಾಐಧನ ವಿತರಿಸಲಾಯಿತು.
ನಗರಸಭಾ ಅಧ್ಯಕ್ಷೆ ಟಿ.ಪಿ ಶಾಂತಾ ಸಮಾರಂಭ ಉದ್ಘಾಟಿಸಿ ಸಹಾಯಧನದ ಚೆಕ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ನಗರಸಭಾ ಉಪಾಧ್ಯಕ್ಷ ಪಿ.ಪಿ ಮಹಮ್ಮದ್ ರಾಫಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯೀ ಸಮಿತಿ ಅಧ್ಯಕ್ಷರಾದ ಪಿ. ಗೌರಿ, ಟಿ.ಪಿ ಲತಾ, ದಾಕ್ಷಾಯಿಣಿ ಕುಞÂಕಣ್ಣನ್, ಪಿ. ಸುಭಾಷ್, ನಗರಸಭಾ ಸದಸ್ಯ ಇ.ಶಜೀರ್ ಮುಂತಾದವರು ಉಪಸ್ಥಿತರಿದ್ದರು.