ಬದಿಯಡ್ಕ: ಶನಿವಾರ ನಿಧನರಾದ ಬಡವರ ಬಂಧು ಸಾಯಿ ರಾಮ್ ಗೋಪಾಲಕೃಷ್ಣ ಭಟ್ ಅವರ ಮನೆಗೆ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಭೇಟಿ ನೀಡಿ ಕುಟುಂಬವನ್ನು ಸಂತೈಸಿದರು. ಕಾಂಗ್ರೆಸ್ ನೇತಾರರಾದ ಪಿಜಿ ಚಂದ್ರಹಾಸ ರೈ, ಮಾಹಿನ್ ಕೇಳೊಟ್, ನಾರಾಯಣ ಮಣಿಯಾಣಿ, ಶ್ಯಾಮ್ ಪ್ರಸಾದ್ ಮಾನ್ಯ, ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್, ನಿರಂಜನ್ ರೈ ಪೆರಡಾಲ, ರವಿ ಮೆಣಸಿನಪಾರೆ ಮೊದಲಾದವರಿದ್ದರು.