HEALTH TIPS

ಸಂಸ್ಕøತಿ, ರಾಷ್ಟ್ರ ರಕ್ಷಣೆಗೆ ಪೂರಕವಾದ ಚಟುವಟಿಕೆ ನಡೆಯಬೇಕು: ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ ಕಾಸರಗೋಡು ಜಿಲ್ಲಾ ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಪಿ.ಎಂ.ವಾಸುದೇವನ್

  

                 ಕುಂಬಳೆ: ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ಸದಸ್ಯರನ್ನೊಳಗೊಂಡ ಬಲಿಷ್ಠ ಸಂಘಟನೆಯಾಗಿ ರೂಪುಗೊಳ್ಳುವತ್ತ ನಮ್ಮೀ ಸಂಘಟನೆಯು ಮುಂದುವರಿಯುತ್ತಿದ್ದು, ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿ ಮುನ್ನಡೆಯುವ ಧೈರ್ಯವನ್ನು ನಾವು ತೋರಬೇಕಾಗಿದೆ. ರಾಜ್ಯದಲ್ಲಿ ಸರ್ಕಾರದ ಬೆಂಬಲದೊಂದಿಗೆ ನಡೆಯುತ್ತಿರುವ ವಿದ್ವಂಸಕ ಕೃತ್ಯಗಳು ವಿಪರೀತವಾಗಿದೆ. ಇದೆಲ್ಲದರ ನಡುವೆ ನಮ್ಮ ನಾಡಿನ ಸಂಸ್ಕøತಿಗೆ ಪೂರಕವಾದ ಚಟುವಟಿಕೆಗಳತ್ತ ಮನಮಾಡಬೇಕು ಎಂದು ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ ರಾಜ್ಯ ಕಾರ್ಯದರ್ಶಿ ಪಿ.ಎಂ. ವಾಸುದೇವನ್ ಹೇಳಿದರು.

             ಮಂಗಳವಾರ ಸೂರಂಬೈಲಿನಲ್ಲಿರುವ ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಸಭಾ ಭÀವನದಲ್ಲಿ ನಡೆದ ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ ಕಾಸರಗೋಡು ಜಿಲ್ಲಾ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 

                 ರಾಜ್ಯವು ಭೀಕರರ ನಾಡಾಗಿ ಪರಿವರ್ತನೆಯಾಗುತ್ತಿದ್ದು ಅದಕ್ಕೆ ಪೂರಕವಾದ ಬೆಂಬಲವನ್ನು ನೀಡುವ ಸರ್ಕಾರವು ಇಂದು ಆಡಳಿತ ನಡೆಸುತ್ತಿದೆ. ಎಸ್.ಡಿ.ಪಿ.ಐ. ಯಂತಹ ಸಂಘಟನೆಗಳು ದೇಶಕ್ಕೇ ಮಾರಕವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯದ ಜನರ ಹಣವನ್ನು ಸರ್ಕಾರ ಲೂಟಿ ಮಾಡಿ ತನ್ನ ಪಕ್ಷದ ನಿಧಿಯನ್ನು ಹೆಚ್ಚಿಸುತ್ತಿದೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಮೀಸಲಾತಿಯನ್ನು ನೀಡಿ ಒಂದು ಸಮುದಾಯಕ್ಕೆ ಮಾತ್ರವಾಗಿ ಅನೂಕಲಕರ ವಾತಾವರಣವನ್ನು ಉಂಟುಮಾಡುವತ್ತ ಪಿಣರಾಯಿ ಸರ್ಕಾರವು ಮುನ್ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದರು. 

              ಕೆಎಸ್‍ಪಿ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀಧರ ಭಟ್ ಬೆಳಗ್ಗೆ ಧ್ವಜಾರೋಹಣಗೈದು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಬೋಧನಾ ಸಮಿತಿಯ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಘಟನಾ ಭಾಷಣ ಮಾಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಹಳೆಯ ಬೇರು ಹೊಸಚಿಗುರು ಸೇರಿದರೆ ಮಾತ್ರ ಗಟ್ಟಿಯಾದ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗಲು ಸಾಧ್ಯವಿದೆ. ಇಳಿವಯಸ್ಸಿನಲ್ಲಿಯೂ ಸಂಘಟನೆ ಬೇಕು ಎಂಬ ಚಿಂತನೆಯೊಂದಿಗೆ ಒಂದು ಸೇರಿರುವ ತಮ್ಮೆಲ್ಲರ ಕಾಳಜಿ ಪ್ರಶಂಸನೀಯ. ಭಗವಂತ ಕೊಟ್ಟ ಶಕ್ತಿಯನ್ನು ಈ ಮಣ್ಣಿಗೋಸ್ಕರ ವ್ಯಯಿಸಬೇಕಾಗಿರುವುದು ನನ್ನ ಕರ್ತವ್ಯ ಎಂಬ ಭಾವನೆಯೊಂದಿಗೆ ದುಡಿಯುವ ಹಿರಿಯರಿಂದಾಗಿ ನಾವಿಂದು ಉಳಿದಿದ್ದೇವೆ ಎಂದರು. 

                  ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕೆಎಸ್‍ಪಿ ಸಂಘದ ರಾಜ್ಯ ಉಪಾಧ್ಯಕ್ಷ ಈಶ್ವರ ರಾವ್, ಎನ್.ಟಿ.ಯು ಕೇರಳ ರಾಜ್ಯ ಕಾರ್ಯದರ್ಶಿ ರತೀಶ್ ಕೃಷ್ಣನ್, ಎನ್.ಟಿ.ಯು. ಕೇರಳ ರಾಜ್ಯ ಕಾರ್ಯದರ್ಶಿ ಪ್ರಭಾಕರನ್ ನಾಯರ್ ಶುಭಾಶಂಸನೆಗೈದರು. ಇದೇ ಸಂದರ್ಭದಲ್ಲಿ ಸಮಾಜಸೇವೆಗೈಯುತ್ತಿರುವ ಟಿ.ನಾರಾಯಣ ಭಟ್ ಮತ್ತು ಪ್ರಭಾವತಿ ದಂಪತಿಗಳನ್ನು ಸನ್ಮಾನಿಸಲಾಯಿತು. ಖಚಾಂಜಿ ಕೆ.ಕೇಶವ ಪ್ರಸಾದ ಲೆಕ್ಕಪತ್ರ ಹಾಗೂ ಜಿಲ್ಲಾ ಕಾರ್ಯದರ್ಶಿ ಅರವಿಂದ ಕುಮಾರ್ ಎನ್.ಕೆ. ವರದಿಯನ್ನು ಮಂಡಿಸಿದರು. ಜಿಲ್ಲಾ ಜೊತೆಕಾರ್ಯದರ್ಶಿ ಮಾಧವನ್ ವಂದಿಸಿದರು. ಎಣ್ಮಕಜೆ ಘಟಕದ ಕಾರ್ಯದರ್ಶಿ ನಾರಾಯಣ ರಾವ್ ಎಂ. ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries