HEALTH TIPS

ನಾಳೆ ಲಾಕ್‍ಡೌನ್ ಗೆ ಸಮಾನ ರೀತಿಯ ನಿಯಂತ್ರಣ; ರಿಯಾಯಿತಿಗಳು ಮತ್ತು ನಿರ್ಬಂಧಗಳನ್ನು ತಿಳಿಯಿರಿ

                                                  

              ತಿರುವನಂತಪುರ: ಕೋವಿಡ್ ನಿಯಂತ್ರಣದ ಭಾಗವಾಗಿ ನಾಳೆ ರಾಜ್ಯದಲ್ಲಿ ಲಾಕ್‍ಡೌನ್ ಗೆ ಸಮಾನ ರೀತಿಯ ನಿಯಂತ್ರಣವಿರುತ್ತದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ ಪರಿಶೀಲನಾ ಸಭೆಯು ಜನವರಿ 23 ಮತ್ತು 30 ರಂದು (ಭಾನುವಾರ) ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ನಿರ್ಧರಿಸಿದೆ. ನಿರ್ಬಂಧಗಳನ್ನು ಜಾರಿಗೊಳಿಸಲು ಮತ್ತು ಉಲ್ಲಂಘನೆಗಳನ್ನು ಪತ್ತೆಹಚ್ಚಲು ಪೆÇಲೀಸ್ ತಪಾಸಣೆ ಇರುತ್ತದೆ. ನಾಳೆಯ ನಿರ್ಬಂಧಗಳು ಮತ್ತು ವಿನಾಯಿತಿಗಳನ್ನು ತಿಳಿಯಿರಿ.

            ಭಾನುವಾರದಂದು ಕೇವಲ 20 ಜನರಿಗೆ ಮಾತ್ರ ವಿವಾಹ ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿದೆ. ಭಾನುವಾರ ಕೆಲಸಕ್ಕೆ ಹೋಗಬೇಕಾದವರು ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಬಹುದು. ಪರೀಕ್ಷೆ ಬರೆಯಲಿರುವವರು ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಬಹುದು. ತುರ್ತು ವಾಹನ ದುರಸ್ತಿಗಾಗಿ ಕಾರ್ಯಾಗಾರಗಳನ್ನು ತೆರೆಯಲು ಅನುಮತಿ ನೀಡಲಾಗುವುದು. ದೂರದ ಪ್ರಯಾಣ ಮಾಡುವವರು ತಮ್ಮ ರೈಲು, ಬಸ್ ಮತ್ತು ವಿಮಾನ ಪ್ರಯಾಣದ ದಾಖಲೆಗಳನ್ನು ತೋರಿಸಿ ಪ್ರಯಾಣಿಸಬಹುದು.

               ರೆಸ್ಟೋರೆಂಟ್‍ಗಳು ಮತ್ತು ಬೇಕರಿಗಳು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಪಾರ್ಸೆಲ್‍ಗಳಿಗಾಗಿ ತೆರೆದಿರುತ್ತವೆ. ದಿನಸಿ, ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರಾಟ ಮಳಿಗೆಗಳು, ಮಾಂಸದ ಅಂಗಡಿಗಳು ಮತ್ತು ಶೇಂದಿ  ಅಂಗಡಿಗಳನ್ನು ಸಹ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು.

                  ಏತನ್ಮಧ್ಯೆ, ಜನವರಿ 23 ಮತ್ತು 30 ರಂದು ನಡೆಯಬೇಕಿದ್ದ ಪಿಎಸ್‍ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.  23ರಂದು ನಿಗದಿಯಾಗಿದ್ದ ವೈದ್ಯಕೀಯ ಶಿಕ್ಷಣದಲ್ಲಿ ರಿಸೆಪ್ಷನಿಸ್ಟ್ ಪರೀಕ್ಷೆಯು ಜನವರಿ 27ರಂದು ನಡೆಯಲಿದೆ. 23ಕ್ಕೆ ಲ್ಯಾಬೋರೇಟರಿ ಟೆಕ್ನಿಷಿಯನ್ ಗ್ರೇಡ್ 2 ಪರೀಕ್ಷೆಗಳು ಜನವರಿ 28 ರಂದು ನಡೆಯಲಿದೆ ಎಂದು ಪಿಎಸ್‍ಸಿ ತಿಳಿಸಿದೆ. ಜನವರಿ 30 ರಂದು ನಡೆಯಬೇಕಿದ್ದ ಜಲ ಪ್ರಾಧಿಕಾರದ ಆಪರೇಟರ್ ಪರೀಕ್ಷೆಯನ್ನು ಫೆಬ್ರವರಿ 4 ಕ್ಕೆ ಮುಂದೂಡಲಾಗಿದೆ. ಪರಿಷ್ಕøತ ದೈನಂದಿನ ವೇಳಾಪಟ್ಟಿಯನ್ನು ಪಿಎಸ್‍ಸಿ ವೆಬ್‍ಸೈಟ್‍ನಲ್ಲಿಯೂ ಪ್ರಕಟಿಸಲಾಗಿದೆ.

                    ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಬಿಗಿಗೊಳಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸರ್ಕಾರಕ್ಕೆ ಸೂಚಿಸಿದ್ದಾರೆ. ಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಬೇಡಿ. ಜ್ವರದ ಲಕ್ಷಣ ಇರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಶೀತದಂತಹ ರೋಗಲಕ್ಷಣಗಳನ್ನು ಹೊಂದಿರುವವರು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಸಚಿವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries