ತಿರುವನಂತಪುರ: ವಿದ್ಯಾರ್ಥಿ ಪೋಲೀಸರಲ್ಲಿ (ಎಸ್.ಪಿ.ಸಿ) ಧಾರ್ಮಿಕ ಉಡುಗೆ ತೊಡುಗೆಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಹಿಜಾಬ್ ಗೆ ಅವಕಾಶ ನೀಡಬೇಕು ಎಂದು ವಿದ್ಯಾರ್ಥಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಆದೇಶ ಹೊರಡಿಸಿದೆ. ಸರ್ಕಾರಿ ಆದೇಶದಲ್ಲಿ ವಿದ್ಯಾರ್ಥಿ ಪೋಲೀಸ್ ಕೆಡೆಟ್‍ಗಳು ಲಿಂಗ ತಟಸ್ಥ ಸಮವಸ್ತ್ರವನ್ನು ಧರಿಸಬೇಕು ಎಂದು ಹೇಳುತ್ತದೆ.
ಗೃಹ ಕಾರ್ಯದರ್ಶಿಯವರ ಆದೇಶವನ್ನು ಹೈಕೋರ್ಟ್‍ಗೆ ರವಾನಿಸಲಾಗುವುದು. ಸೇನೆಯ ಜಾತ್ಯತೀತ ನಿಲುವನ್ನು ಉಲ್ಲೇಖಿಸಿ ಹಿಜಾಬ್ ಮತ್ತು ಸ್ಕಾರ್ಫ್‍ಗೆ ಅವಕಾಶ ನೀಡುವುದಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ. ಕುಟ್ಯಾಡಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ನ್ಯಾಯಮೂರ್ತಿ ವಿವಿ ಕುಂಞÂ್ಞ ಕೃಷ್ಣನ್ ಅವರು ಸರ್ಕಾರವನ್ನು ಸಂಪರ್ಕಿಸುವಂತೆ ಸೂಚಿಸಿದರು.
ವಿದ್ಯಾರ್ಥಿ ಪೊಲೀಸ್‍ನಲ್ಲಿ ವಿವಿಧ ಧರ್ಮದವರಿದ್ದಾರೆ. ಅವರಲ್ಲಿ ಶೇಕಡ 50 ರಷ್ಟು ಹುಡುಗಿಯರು, ಮುಸ್ಲಿಮರು. ಇದುವರೆಗೂ ಅಂತಹ ಬೇಡಿಕೆ ಬಂದಿಲ್ಲ. ಒಬ್ಬ ಹುಡುಗಿ ಮಾತ್ರ ಈ ಬೇಡಿಕೆ ಇರಿಸಿದ್ದಾಳೆ. ಆದ್ದರಿಂದ ಗೃಹ ಇಲಾಖೆಯ ನಿಲುವು ಸ್ವೀಕಾರಾರ್ಹವಲ್ಲ.
ಭಾರತ ಸಂವಿಧಾನದ 25 (1) ನೇ ವಿಧಿಯ ಅಡಿಯಲ್ಲಿ, ತನಗೆ ಇಷ್ಟವಾದಂತೆ ಬಟ್ಟೆ ಧರಿಸುವುದು ತನ್ನ ಮೂಲಭೂತ ಹಕ್ಕು ಮತ್ತು ಧಾರ್ಮಿಕ ಉಡುಪುಗಳನ್ನು ಧರಿಸಿ ವಿದ್ಯಾರ್ಥಿ ಪೊಲೀಸ್ ಕೆಡೆಟ್‍ನ ಶಿಸ್ತು ಅಥವಾ ಇತರರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮಗು ಮನವಿ ಮಾಡಿದೆ.
ಆದರೆ ಮಕ್ಕಳಲ್ಲಿ ಶಿಸ್ತು, ಕಾನೂನು ಮತ್ತು ಪೌರತ್ವವನ್ನು ಬೆಳೆಸಲು ರೂಪಿಸಲಾದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕಿಂತ ದೇಶವೇ ಮುಖ್ಯ ಎಂದು ಗೃಹ ಇಲಾಖೆ ಸ್ಪಷ್ಟಪಡಿಸಿದೆ. ಕೇರಳ ಪೊಲೀಸ್‍ನಲ್ಲಿ, ಎಲ್ಲಾ ಅಧಿಕಾರಿಗಳು ಅವರ ಧರ್ಮವನ್ನು ಲೆಕ್ಕಿಸದೆ ಒಂದೇ ಸಮವಸ್ತ್ರವನ್ನು ಧರಿಸುತ್ತಾರೆ. ಅಲ್ಲಿ ಯಾವುದೇ ಧಾರ್ಮಿಕ ಚಿಹ್ನೆಗಳಿಗೆ ಅವಕಾಶವಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.