ಕಾಸರಗೋಡು: ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೊರ ರೋಗಿ ವಿಭಾಗ ಆರಂಭಗೊಂಡ ಮೊದಲ ದಿನವೇ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಆಗಮಿಸಿ ವೈದ್ಯರಲ್ಲಿ ತಪಾಸಣೆ ನಡೆಸಿದರು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನರರೋಗ ತಜ್ಞರನ್ನು ಆಸ್ಪತ್ರೆಯಲ್ಲಿ ನೇಮಿಸಲಾಗಿದ್ದು, ಎಂಟಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಲಾಯಿತು. ಇವರಲ್ಲಿ ಬಹುತೇಕ ಮಂದಿ ಎಂಡೋಸಲ್ಫಾನ್ ಸಂಬಂಧಿ ಕಾಯಿಲೆ ರೋಗಿಗಳಾಗಿದ್ದರು. ನರರೋಗ ತಜ್ಞರಾಗಿ ಡಾ. ಜಿತಿನ್‍ರಾಜ್ ಅವರನ್ನು ನೇಮಿಸಲಾಗಿದ್ದು, ನರದೌರ್ಬಲ್ಯ, ಬುದ್ಧಿಮಾಂದ್ಯ ಸೇರಿದಂತೆ ವಿವಿಧ ರೋಗಿಗಳ ತಪಾಸಣೆ ನಡೆಸಿದರು. ಆರಂಭದ ದಿನ 30ಕ್ಕೂ ಹೆಚ್ಚು ಮಂದಿ ಹೊರ ರಓಗಿಗಳಾಗಿ ತಪಾಸಣೆ ನಡೆಸಿದರು. ಜಿಲ್ಲೆಯ ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರು ಎದುರಿಸುತ್ತಿರುವ ನ್ಯೂರಾಲಜಿಕಲ್ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು, ಭವಿಷ್ಯದಲ್ಲಿ ವೈದ್ಯಕೀಯ ಕಾಲೇಜಿನಲ್ಲಿ ಅವರಿಗೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಡಾ. ಜಿತಿನ್‍ರಾಜ್ ತಿಳಿಸಿದ್ದಾರೆ.
ಇದರೊಂದಿಗೆ ನ್ಯೂರಾಲಜಿ. ನುಮೇಟಾಲಜಿ, ನೆಫ್ರಾಲಜಿ ವಿಭಾಗದ ವಿಶೇಷ ವೈದ್ಯರ ಸೇವೆಯೂ ಲಭ್ಯವಿರಲಿದೆ. ಸರ್ಜರಿ, ಇಎನ್‍ಟಿ, ಒಫ್ತಾಲ್ಮೋಲಜಿ, ಡೆಂಟಲ್ ಓಪಿ ವಿಭಾಗವೂ ಕಾರ್ಯಾಚರಿಸಲಿದೆ.