ಕೊಚ್ಚಿ: ನಟಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಅವರ ಮನೆ ಮತ್ತು ನಿವೇಶನಗಳಲ್ಲಿ ಪೋಲೀಸರ ಶೋಧ ಕಾರ್ಯ ಪೂರ್ಣಗೊಂಡಿದೆ. ಮನೆಯಿಂದ ಮೊಬೈಲ್ ಪೋನ್ ಮತ್ತು ಹಾರ್ಡ್ ಡಿಸ್ಕ್ ವಶಪಡಿಸಿಕೊಳ್ಳಲಾಗಿದೆ. ಏಳು ಗಂಟೆಗಳ ಕಾಲ ದಿಲೀಪ್ ಅವರ ಮನೆ ಮತ್ತು ನಿವೇಶನಗಳಲ್ಲಿ ಶೋಧಕಾರ್ಯ ನಡೆಯಿತು.
ನಿರ್ದೇಶಕ ಬಾಲಚಂದ್ರ ಕುಮಾರ್ ಹೇಳಿಕೆ ಆಧರಿಸಿ ತನಿಖಾ ತಂಡದ ಮಹತ್ವದ ಕ್ರಮಗಳನ್ನು ಕೈಗೊಂಡಿತು. ಬಾಲಚಂದ್ರ ಕುಮಾರ್ ಪ್ರಕಾರ, ನಟಿಯ ಮೇಲಿನ ಹಲ್ಲೆಯ ದೃಶ್ಯಾವಳಿಗಳನ್ನು ದಿಲೀಪ್ ನೋಡಿದ್ದಾರೆ ಮತ್ತು ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಗೆ ಅಪಾಯವನ್ನುಂಟುಮಾಡಲು ಸಂಚು ರೂಪಿಸಿದ್ದಾರೆ. ಇದು ನಿಜವೇ ಎಂದು ಪರಿಶೀಲಿಸುವುದು ಪರೀಕ್ಷೆಯ ಮುಖ್ಯ ಉದ್ದೇಶವಾಗಿತ್ತು ಎಂದಿರುವರು.
ವಶಪಡಿಸಿಕೊಂಡ ಹಾರ್ಡ್ ಡಿಸ್ಕ್ ಮತ್ತು ಮೊಬೈಲ್ ಪೋನ್ ಗಳನ್ನು ಪೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗುವುದು. ನಟಿಯ ದೃಶ್ಯಾವಳಿಗಳು ಪೋನ್ ಅಥವಾ ಹಾರ್ಡ್ ಡಿಸ್ಕ್‍ನಲ್ಲಿವೆಯೇ ಎಂದು ಪತ್ತೆಹಚ್ಚಲಾಗುವುದು.
ಪ್ರಕರಣದ ತನಿಖೆ ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಆರಂಭವಾಯಿತು. ಆಲುವಾದಲ್ಲಿರುವ ದಿಲೀಪ್ ಮನೆ, ಅವರ ಸಹೋದರ ಅನೂಪ್ ಅವರ ಮನೆಯಲ್ಲೂ ಶೋಧ ನಡೆದಿದೆ. ಗ್ರ್ಯಾಂಡ್ ಪೆÇ್ರಡಕ್ಷನ್ಸ್ ಸೇರಿದಂತೆ ದಿಲೀಪ್ ಮತ್ತು ಅನೂಪ್ ಅವರ ನಿರ್ಮಾಣ ಸಂಸ್ಥೆಗಳು ಪರಿಶೀಲನೆಯಲ್ಲಿವೆ.