ಅಟ್ಟಪ್ಪಾಡಿ: ಅಟ್ಟಪ್ಪಾಡಿಯಲ್ಲಿ ಕೊರೊನಾ ಬಾಧಿಸಿದ ಅರಣ್ಯವಾಸಿ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕಬಳಕಾಡ್‍ನ ಅಬ್ಬನ್ನೂರು ಅಟ್ಟನ್ನವರ ಸೈಜು ಮತ್ತು ಸರಸ್ವತಿ ದಂಪತಿಯ ಎರಡು ವರ್ಷದ ಮಗು ಸ್ವದೀಶ್‍ಗೆ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂಬ ದೂರಿನ ಮೇರೆಗೆ ಸಂಬಂಧಿಕರು ಕೊಟ್ಟತ್ತರ ಗಿರಿಜನ ವಿಶೇಷ ಆಸ್ಪತ್ರೆಗೆ ದಾಖಲಿಸಿದ್ದರು.
ಶನಿವಾರ ಬೆಳಗ್ಗೆ ಮಗು ಸಾವನ್ನಪ್ಪಿದೆ. ತೀವ್ರ ಜ್ವರದ ಹಿನ್ನೆಲೆಯಲ್ಲಿ ಮೇ 25ರಂದು ಅಗಳಿಯ ಖಾಸಗಿ ಆಸ್ಪತ್ರೆಗೆ ಬಾಲಕ ದಾಖಲಾಗಿದ್ದು, ಜ್ವರದಿಂದ ಬಳಲುತ್ತಿದ್ದ ಆತನನ್ನು ಮೇ 27ರಂದು ಕೊಟ್ಟತ್ತರ ಗಿರಿಜನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕನ ಪೋಷಕರು ಆಸ್ಪತ್ರೆಯಲ್ಲಿ ದಾಖಲುಗೊಳಿಸಿ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದರು. ಆದರೆ ಮನೆಗೆ ತೆರಳುವಂತೆ ಅ|ಧಿಕೃತರು ಹೇಳಿದ್ದರು ಎಂದು ಆರೋಪಿಸಲಾಗಿದೆ. ಮಗು ಸಾವನ್ನಪ್ಪಿದ ಬಳಿಕ ಆಸ್ಪತ್ರೆ ಅಧೀಕ್ಷಕರನ್ನು ಕರೆಸಿದಾಗ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸಿರಲಿಲ್ಲ ಎಂದು ತಿಳಿಸಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.