ಬದಿಯಡ್ಕ: ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾ ದಿನ ಮಹೋತ್ಸವ ಹಾಗೂ ದೈವಗಳ ನೇಮೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ಶ್ರೀ ಬಬ್ಬರ್ಯ ದೈವದ ದರ್ಶನ, ಶ್ರೀ ಪೂಮಾಣಿ-ಕಿನ್ನಿಮಾಣಿ ದೈವಗಳ ನೇಮ, ಮಧ್ಯಾಹ್ನ ಶ್ರೀ ಬಿರ್ಣಾಳ್ವ ದೈವದ ನೇಮ, ಸಂಜೆ ಶ್ರೀ ಧೂಮಾವತಿ ದೈವದ ನೇಮ, ಗುಳಿಗ, ಕೊರತಿ ದೈವಗಳ ನೇಮ, ರಾತ್ರಿ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಿತು.