ಉಪ್ಪಳ: ಬಿಎಂಎಸ್ ತಲೆಹೊರೆ ಕಾರ್ಮಿಕ ಸಂಘದ ಉಪ್ಪಳ ಯೂನಿಟ್ ಸಮ್ಮೇಳನ ಉಪ್ಪಳ ಸಂಘದ ಕಚೇರಿಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಳ ಯೂನಿಟ್ ಅಧ್ಯಕ್ಷ ಬಾಲನ್ ವಹಿಸಿದ್ದರು.
ಕಾರ್ಯಕ್ರಮವನ್ನು ಬಿಎಂಎಸ್ ಕಾಸರಗೂಡು ಜಿಲ್ಲಾ ಉಪಾಧ್ಯಕ್ಷ, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀನಿವಾಸನ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ಸಂಘಟನೆಯ ಜಿಲ್ಲಾ ಕೋಶಾದಿಕಾರಿ ದಿಲೀಪ್ ಕುದ್ರೆಪ್ಪಾಡಿ ನೂತನ ಸಮಿತಿಯನ್ನು ಘೋಶಿಸಿದರು. ಸಮಾರೋಪದಲ್ಲಿ ಕುಂಬಳೆ ವಲಯ ಅಧ್ಯಕ್ಷ ಐತ್ತಪ್ಪ ನಾರಾಯಣಮಂಗಲ ಶಭಾಂಶಸನೆಗೈದರು. ವರದಿಯನ್ನು ಘಟಕದ ಕಾರ್ಯದರ್ಶಿ ಸಂಜೀವ ಮಂಡಿಸಿದರು. ಲೆಕ್ಕ ಪತ್ರವನ್ನು ಕೋಶಾಧಿಕಾರಿ ರಂಜನ್ ಮಂಡಿಸಿದರು. ಈ ಸಂದರ್ಭದಲ್ಲಿ ಅಗಲಿದ ಕಾರ್ಮಿಕರ ಶಾಂತಿಗಾಗಿ ಪ್ರಾರ್ಥಿಸಲಾಯಿತು. ಘಟಕದ ಜತೆ ಕಾರ್ಯದರ್ಶಿ ಗಣೇಶ ಸ್ವಾಗತಿಸಿ, ನೂತನ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ ವಂದಿಸಿದರು.